Monday, July 27, 2026
Homeಅಪರಾಧಚಡ್ಡಿಯಲ್ಲಿ ಮೂತ್ರ ವಿಸರ್ಜಿಸಿದ್ದಕ್ಕೆ ಮಗುವಿನ ಖಾಸಗಿ ಅಂಗವನ್ನೇ ಸುಟ್ಟ ಶಿಕ್ಷಕಿ; ಪ್ಲೇ ಸ್ಕೂಲ್‌ನಲ್ಲಿ ಮಗುವಿನ ಮೇಲೆ...

ಚಡ್ಡಿಯಲ್ಲಿ ಮೂತ್ರ ವಿಸರ್ಜಿಸಿದ್ದಕ್ಕೆ ಮಗುವಿನ ಖಾಸಗಿ ಅಂಗವನ್ನೇ ಸುಟ್ಟ ಶಿಕ್ಷಕಿ; ಪ್ಲೇ ಸ್ಕೂಲ್‌ನಲ್ಲಿ ಮಗುವಿನ ಮೇಲೆ ಶಿಕ್ಷಕಿಯ ಕ್ರೌರ್ಯ

- Advertisement -
- Advertisement -

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಅತ್ಯಂತ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದ್ದು, ಪ್ಲೇ ಸ್ಕೂಲ್‌ನಲ್ಲಿ ಮಗುವೊಂದು ಚಡ್ಡಿಯಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಶಿಕ್ಷಕಿಯೊಬ್ಬರು ಬಿಸಿ ಚಾಕುವಿನಿಂದ ಆ ಮಗುವಿನ ಖಾಸಗಿ ಅಂಗವನ್ನೇ ಸುಟ್ಟು ಕ್ರೌರ್ಯ ಮೆರೆದಿದ್ದಾರೆ.

ಸ್ಥಳೀಯ ನ್ಯಾಯವಾದಿಯೊಬ್ಬರ 5 ವರ್ಷದ ಮಗ ವಾರಾಣಸಿಯ ಪ್ಲೇ ಸ್ಕೂಲ್‌ನಲ್ಲಿ ಓದುತ್ತಿದ್ದ. ತರಗತಿಯಲ್ಲಿದ್ದಾಗ ಮಗು ಶೌಚಾಲಯಕ್ಕೆ ಹೋಗಲು ಅನುಮತಿ ಕೇಳಿದಾಗ ಶಿಕ್ಷಕಿ ನಿರಾಕರಿಸಿದ್ದಾರೆ. ಇದರಿಂದ ನಿಯಂತ್ರಣ ತಪ್ಪಿದ ಮಗು ಚಡ್ಡಿಯಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಶಿಕ್ಷಕಿ, ಮಗುವನ್ನು ಮತ್ತೊಂದು ಕೊಠಡಿಗೆ ಎಳೆದೊಯ್ದು ಗ್ಯಾಸ್ ಸ್ಟೌವ್‌ನಲ್ಲಿ ಚಾಕುವನ್ನು ಕೆಂಪಗೆ ಕಾಯಿಸಿ ಮಗುವಿನ ಖಾಸಗಿ ಅಂಗವನ್ನು ಸುಟ್ಟಿದ್ದಾರೆ. ಅಷ್ಟೇ ಅಲ್ಲದೆ, ಮಗುವಿನ ಮೇಲೆ ಹಲ್ಲೆ ನಡೆಸಿ ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ.

ಮನೆಗೆ ಬಂದ ಮಗು ನೋವಿನಿಂದ ಅಳುತ್ತಾ ಪೋಷಕರಿಗೆ ವಿಷಯ ತಿಳಿಸಿದಾಗ ತಾಯಿ ಪರಿಶೀಲಿಸಿದ್ದು, ಖಾಸಗಿ ಅಂಗದ ಮೇಲೆ ತೀವ್ರ ಗಾಯಗಳಾಗಿರುವುದು ಕಂಡುಬಂದಿದೆ. ಈ ಬಗ್ಗೆ ಶಿಕ್ಷಕಿಗೆ ಕರೆ ಮಾಡಿದರೂ ಆಕೆ ಸ್ವೀಕರಿಸಲಿಲ್ಲ. ಮರುದಿನ ವಿಚಾರಿಸಲು ಶಾಲೆಗೆ ಹೋದ ಪೋಷಕರಿಗೆ ಶಾಲೆಯ ಪ್ರಿನ್ಸಿಪಾಲ್ ಮತ್ತು ಮ್ಯಾನೇಜ್‌ಮೆಂಟ್ ಕೂಡ ಬೆದರಿಕೆ ಹಾಕಿ ವಾಪಾಸ್ ಕಳುಹಿಸಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಮಗುವಿನ ತಂದೆ ಲಾಲ್‌ಪುರ್-ಪಾಂಡೇಪುರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

- Advertisement -

Latest News

error: Content is protected !!