Monday, July 27, 2026
Homeಕರಾವಳಿಉಡುಪಿಕಾರ್ಕಳದ ಕೃಷಿ ಕುಟುಂಬದ ಸಂಹಿತ್ ಹೆಗ್ಡೆ ಸಿಆರ್‌ಪಿಎಫ್ ಸಬ್ ಇನ್‌ಸ್ಪೆಕ್ಟರ್ ಆಗಿ ಆಯ್ಕೆ!

ಕಾರ್ಕಳದ ಕೃಷಿ ಕುಟುಂಬದ ಸಂಹಿತ್ ಹೆಗ್ಡೆ ಸಿಆರ್‌ಪಿಎಫ್ ಸಬ್ ಇನ್‌ಸ್ಪೆಕ್ಟರ್ ಆಗಿ ಆಯ್ಕೆ!

- Advertisement -
- Advertisement -

ಕಾರ್ಕಳ: ದೇಶದ ಆಂತರಿಕ ಭದ್ರತೆಯ ಬೆನ್ನೆಲುಬಾಗಿರುವ ಕೇಂದ್ರೀಯ ಸಶಸ್ತ್ರ ಪೊಲೀಸ್ ಮೀಸಲು ಪಡೆಗೆ (CRPF) ಸಬ್ ಇನ್‌ಸ್ಪೆಕ್ಟರ್ (SI) ಆಗಿ ಕಾರ್ಕಳ ತಾಲೂಕಿನ ಹೆರ್ಮುಂಡೆ ಗ್ರಾಮದ ಯುವಕ ಸಂಹಿತ್ ಹೆಗ್ಡೆ ಆಯ್ಕೆಯಾಗಿದ್ದಾರೆ.

ಸತೀಶ್ಚಂದ್ರ ಹೆಗ್ಡೆ ಮುದ್ರಾಡಿ ಹಾಗೂ ಜಯಲಕ್ಷ್ಮೀ ಹೆಗ್ಡೆ ದಂಪತಿಯ ಪುತ್ರರಾದ ಸಂಹಿತ್, ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ, ಗ್ರಾಮೀಣ ಹಿನ್ನೆಲೆಯಿಂದ ಬಂದು ತಮ್ಮ ನಿರಂತರ ಪರಿಶ್ರಮದ ಮೂಲಕ ದೇಶಸೇವೆಯ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಬಾಲ್ಯದಿಂದಲೇ ಸಮವಸ್ತ್ರಧಾರಿ ಸೇವೆಯ ಬಗ್ಗೆ ಆಸಕ್ತಿ ಹೊಂದಿದ್ದ ಸಂಹಿತ್, ಅದನ್ನೇ ಗುರಿಯಾಗಿಸಿಕೊಂಡು ಸತತ ಅಭ್ಯಾಸ ನಡೆಸಿದ್ದರು. ಇವರು ಪ್ರಾಥಮಿಕ ಶಿಕ್ಷಣವನ್ನು ಹೆರ್ಮುಂಡೆಯ ಸರಕಾರಿ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ದುರ್ಗ-ತೆಳ್ಳಾರಿನ ಬಿ. ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಹಾಗೂ ಪಿಯುಸಿ ಮತ್ತು ಬಿ.ಎಸ್‌ಸಿ ಪದವಿಯನ್ನು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.

- Advertisement -

Latest News

error: Content is protected !!