Monday, July 27, 2026
Homeಕರಾವಳಿಮಂಗಳೂರುಬೆಳ್ತಂಗಡಿ : ನಗರದಲ್ಲಿ ಸರಣಿ ಕಳ್ಳತನ ಪ್ರಕರಣ; ಅಂತರ್ ರಾಜ್ಯ ಕುಖ್ಯಾತ ಕಳ್ಳನ ಸ್ಥಳ ಮಹಜರು

ಬೆಳ್ತಂಗಡಿ : ನಗರದಲ್ಲಿ ಸರಣಿ ಕಳ್ಳತನ ಪ್ರಕರಣ; ಅಂತರ್ ರಾಜ್ಯ ಕುಖ್ಯಾತ ಕಳ್ಳನ ಸ್ಥಳ ಮಹಜರು

- Advertisement -
- Advertisement -

ಬೆಳ್ತಂಗಡಿ: ನಗರದ ಮೂರು ಮಾರ್ಗದ ಬಳಿಯಿಂದ ಮಾತೃ ಶ್ರೀ ಹೊಟೇಲ್ ಹಾಗೂ ಕೋರ್ಟ್ ರಸ್ತೆಯವರೆಗೆ ಮೇ.19 ರಂದು ತಡರಾತ್ರಿ 11 ಕಡೆಗಳಲ್ಲಿ ಕಳ್ಳತನ ನಡೆಸಿ ನಗದು ಸಹಿತ ಇನ್ನಿತರ ವಸ್ತುಗಳನ್ನ ದೋಚಿದ್ದ ಅಂತರ್ ರಾಜ್ಯ ಕುಖ್ಯಾತ ಕಳ್ಳನನ್ನು ಹೆಚ್ಚಿನ ವಿಚಾರಣೆಗಾಗಿ ಜು.27ರಂದು ಬೆಳ್ತಂಗಡಿ ಪೊಲೀಸರು ಮತ್ತೆ ಜೈಲಿನಿಂದ ಕರೆ ತಂದು ಕಳ್ಳತನ ನಡೆಸಿದ ಮಾತೃಶ್ರೀ ಹೋಟೆಲ್ ಸೇರಿದಂತೆ ಸುತ್ತಮುತ್ತಲಿನ ಅಂಗಡಿಗಳಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.

ಆರೋಪಿ: ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ನೇತೃತ್ವದ ತಂಡಕ್ಕೆ ಗುರುವಾಯನಕೆರೆ ಜಂಕ್ಷನ್ ನಲ್ಲಿ ಜು.8 ರಂದು ಸಂಜೆ 6 ಗಂಟೆಗೆ ಅನುಮಾನಾಸ್ಪದವಾಗಿ ಓರ್ವ ವ್ಯಕ್ತಿ ತಿರುಗಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಮಿಳುನಾಡು ಜಿಲ್ಲೆಯ ಕೊಯಮುತ್ತೂರಿನ ವಿಜಯಾನ್ ಮಗ ಜಯಕುಮಾರ್(55) ಎಂಬುವುದಾಗಿ ತಿಳಿಸಿದ್ದಾನೆ. ಬಳಿಕ ಬೆಳ್ತಂಗಡಿಯಲ್ಲಿ 3 ಕಡೆ ,ಉಪ್ಪಿನಂಗಡಿಯಲ್ಲಿ 2 ಕಡೆ, ಸುರತ್ಕಲ್ ನಲ್ಲಿ 1 ಕಡೆ ಕಳ್ಳತನ ಸೇರಿ ಒಟ್ಟು ಆರು ಕಡೆಗಳಲ್ಲಿ ಸರಣಿ ಕಳ್ಳತನ ಮಾಡಿರುವುದನ್ನು ವಿಚಾರಣೆ ವೇಳೆ ಆರೋಪಿ ಬಾಯಿಬಿಟ್ಟಿದ್ದ ಬಳಿಕ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಜು.9 ರಂದು ಹಾಜರುಪಡಿಸಿ ಜೈಲಿಗಟ್ಟಿದ್ದರು.

ಬೆಳ್ತಂಗಡಿ ಪೊಲೀಸರು ಆರೋಪಿ ಜಯಕುಮಾರ್ ನನ್ನು ಮಂಗಳೂರು ಜೈಲಿನಿಂದ ಜು.27 ರಂದು ಬೆಳಗ್ಗೆ ಕರೆದುಕೊಂಡು ಬಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ಜು.27 ರಂದು ಸಂಜೆ  ಬೆಳ್ತಂಗಡಿಯ ಮಾತೃಶ್ರೀ ಹೊಟೇಲ್ ಮತ್ತು ಕಳ್ಳತನ ನಡೆಸಿದ ಸುತ್ತಮುತ್ತಲಿನ 5 ಘಟನಾ ಸ್ಥಳಗಳನ್ನು ಗುರುತಿಸಿ ಮಹಜರು ನಡೆಸಲಾಯಿತು. ನಾಳೆ ಉಜಿರೆಯ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದಲ್ಲಿ ನಡೆಸಿದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರೆದುಕೊಂಡು ಹೋಗಿ ಮಹಜರು ನಡೆಸಲಿದ್ದಾರೆ.

- Advertisement -

Latest News

error: Content is protected !!