Friday, June 19, 2026
Homeಚಿಕ್ಕಮಗಳೂರುಚಿಕ್ಕಮಗಳೂರು ; ತಲ್ವಾರ್ ನಿಂದ ಬರ್ತಡೇ ಕೇಕ್ ಕಟ್ ಮಾಡಿ ರೀಲ್ಸ್ ಮಾಡಿದ ಯುವಕ :...

ಚಿಕ್ಕಮಗಳೂರು ; ತಲ್ವಾರ್ ನಿಂದ ಬರ್ತಡೇ ಕೇಕ್ ಕಟ್ ಮಾಡಿ ರೀಲ್ಸ್ ಮಾಡಿದ ಯುವಕ : ಬಂಧಿಸಿ ಜೈಲಿಗೆ ಅಟ್ಟಿದ ಪೊಲೀಸರು

- Advertisement -
- Advertisement -

ಚಿಕ್ಕಮಗಳೂರು ; ತಲ್ವಾರ್ ನಿಂದ ಬರ್ತಡೇ ಕೇಕ್ ಕಟ್ ಮಾಡಿ ರೀಲ್ಸ್ ಮಾಡಿ ಇನ್ಸ್ಟಾಗ್ರಾಂ ನಲ್ಲಿ ಅಪ್ ಲೋಡ್ ಮಾಡಿದ ಶೋಕಿಲಾಲನಿಗೆ  ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಜೈಲಿನ ದಾರಿ ತೋರಿಸಿದ್ದಾರೆ. ಚಿಕ್ಕಮಗಳೂರು ನಗರದ ಟಿಪ್ಪುನಗರ ನಿವಾಸಿ ಸಮೀರ್ ಶೋಕಿ ಮಾಡಿ ಜೈಲು ಸೇರಿದ ಆರೋಪಿ.

ಆರೋಪಿ ಸಮೀರ್ ತನ್ನ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆಯ ರಸ್ತೆ ಮಧ್ಯೆ ತಲ್ವಾರ್ ಹಿಡಿದು ತಲ್ವಾರ್ ನಿಂದ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದ. ಅಲ್ಲದೇ ಚಿಕ್ಕಮಗಳೂರು ನಗರದಾದ್ಯಂತ ಕಾರಿನಲ್ಲಿ  ಮಾರಕಾಸ್ತ್ರಗಳೊಂದಿಗೆ ಸಿಗರೇಟ್ ಸೇದುತ್ತಾ ಚಿಕ್ಕಮಗಳೂರು ನಗರ ಪೊಲೀಸ್ ‌ಠಾಣೆ, ಬಸವನಹಳ್ಳಿ ಪೊಲೀಸ್ ,ಗ್ರಾಮಾಂತರ ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಹಾಕಿದ್ದ. ಅಲ್ಲದೇ ರೀಲ್ಸ್ ನ ಇನ್ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದ.ಸಮೀರ್ ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!