
ಉಡುಪಿ; ಹೋಂ ಸ್ಟೇನಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು ಅಕ್ರಮವಾಗಿ ಮಾದಕ ವಸ್ತು ಸಂಗ್ರಹಿಸಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಿಳೆ ಸೇರಿದಂತೆ 7 ಜನ ಆರೋಪಿಗಳನ್ನು ಮಲ್ಪೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿವರ; ದಿನಾಂಕ 18-06-2026 ರಂದು ಉಡುಪಿ ತಾಲೂಕು ತೆಂಕನಿಡಿಯೂರು ಗ್ರಾಮದ ತೊಟ್ಟಂ ಚರ್ಚ್ ಬಳಿಯ ವಿಶ್ರಾಮ್ ಹೋಂ ಸ್ಟೇಯಲ್ಲಿ ಮ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡಿರುವ ಬಗ್ಗೆ ಮಾಹಿತಿ ಬಂದಂತೆ ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪವಿಭಾಗ ಮತ್ತು ಪೊಲೀಸ್ ವೃತ್ತ ನಿರೀಕ್ಷಕರು ಮಲ್ಪೆರವರ ಮಾರ್ಗದರ್ಶನದಲ್ಲಿ ಮಲ್ಪೆ ಪೊಲೀಸ್ ಠಾಣಾ ಅನೀಲ್ ಕುಮಾರ್ ಡಿ ಉಪನಿರೀಕ್ಷಕರು(ಕಾ&ಸು), ಗಂಗಪ್ಪ ಎಸ್ ಪಿಎಸ್ಐ (ತನಿಖೆ),ಠಾಣಾ ಸಿಬ್ಬಂದಿಯವರಾದ ಹೆಚ್.ಸಿ ಆದರ್ಶ, ಹೆಚ್.ಸಿ ನಾಗೇಶ, ಹೆಚ್.ಸಿ ಉದಯ, ಹೆಚ್.ಸಿ ಆನಂದ ಗಾಣಿಗ, ಪಿಸಿ ನಾಗರಾಜ, ಪಿಸಿ ಕುಬೇರ, ಪಿಸಿ ಅಭಿಷೇಕ್ ಪಿಸಿ ಪ್ರವೀಣ ಆರ್ ರವರ ತಂಡ ವಿಶ್ರಾಮ್ ಹೋಂ ಸ್ಟೇಗೆ ದಾಳಿ ನಡೆಸಿದ್ದು , ಒಂದು ರೂಮ್ ನಲ್ಲಿ ಎಫ್.ಎಂ. ನಾಜಿಲ್, ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ಅಫ್ನಾನ್ ಹಾಗೂ ವಿಘ್ನೇಶ್ ಎಂಬ ನಾಲ್ವರನ್ನು ಪರಿಶೀಲಿಸಿದಾಗ ಅವರು ಮಾದಕ ವಸ್ತು ಸೇವನೆ ಮಾಡಿರುವುದು ತಿಳಿದುಬಂದಿತು. ಪಂಚರ ಸಮಕ್ಷಮ ನಡೆಸಿದ ಶೋಧನೆಯಲ್ಲಿ 33.81 ಗ್ರಾಂ ಗಾಂಜಾ (ಅಂದಾಜು ಮೌಲ್ಯ ₹3,000), 9.73 ಗ್ರಾಂ ಎಂಡಿಎಂಎ (ಅಂದಾಜು ಮೌಲ್ಯ ₹20,000), 5 ಮೊಬೈಲ್ ಫೋನ್ಗಳು ಹಾಗೂ ಇತರ ಸ್ವತ್ತುಗಳು ಪತ್ತೆಯಾಗಿದ್ದು, ಅವುಗಳನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಳ್ಳಲಾಯಿತು.
ಠಾಣಾಧಿಕಾರಿ ಮಲ್ಪೆರವರು ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅನಧೀಕೃತವಾಗಿ ಹೋಂ ಸ್ಟೇ ನಡೆಸದಂತೆ ನೋಟಿಸ್ ನೀಡಿದ್ದರೂ ಅಕ್ರಮವಾಗಿ ಹೋಂ ಸ್ಟೇ ನಡೆಸುತ್ತಿರುವ ಹಾಗೂ ಮಾದಕ ವಸ್ತುಗಳ ಸೇವನೆಗೆ ಸಹಾಯ ಮಾಡಿ ವಿಶ್ರಾಮ್ ಹೋಂ ಸ್ಟೇ ಮಾಲಿಕರಾದ ಧನ್ವನ್ ರಿಕಿತ್ ಮತ್ತು ಕೆಲಸಗಾರನಾದ ಬಸವರಾಜ್ ಭಾಗಿಯಾಗಿದ್ದು ದಸ್ತಗಿರಿಮಾಡಲಾಗಿದೆ ಮತ್ತು ಈ ಪ್ರಕರಣದಲ್ಲಿ ಭಾಗಿಯಾದ ಗೀತಾಂಜಲಿ ಜೇನ ಎಂಬವರನ್ನು ಪೋಲಿಸ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ವಿರುದ್ದ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 67/2026, ಕಲಂ 8(a), 20(b)(ii)(a), 22(b) ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿರುತ್ತದೆ.
ಆರೋಪಿಗಳ ವಿವರ:
1. ನಾಜೀಲ್ (31) ತಂದೆ: ಎಫ್ ಎಂ ರಫೀಕ್ ವಾಸ: ಕುದ್ರು ಸ್ಟೋರ್ ಎದುರುಗಡೆ, ಊರ್ದು ಶಾಲೆ ಹತ್ತಿರ, ಹೂಡೆ ಉಡುಪಿ ತಾಲೂಕು,
2. ಮೊಹಮ್ಮದ್ ಅಜರುದ್ದೀನ್ (42), ತಂದೆ: ದಿ. ಅಬ್ದುಲ್ ರಜಾಕ್ ವಾಸ:ಬಂಗ್ಲೌ ಹೌಸ್ ಹತ್ತಿರ ಮಂಚಕಲ್ ಗ್ರಾಮ, ಕಾಪು ತಾಲೂಕು ಉಡುಪಿ ಜಿಲ್ಲೆ.
3. ಮೊಹಮ್ಮದ್ ಅಫನಾನ್( 19) ತಂದೆ: ಮೊಹಮ್ಮದ್ ಅಝರುದ್ದೀನ್ ವಾಸ: ಬಂಗ್ಲೌ ಹೌಸ್‌ಹತ್ತೀ̧ರ ಮಂಚಕಲ್ ಗ್ರಾಮ, ಕಾಪು ತಾಲೂಕು ಉಡುಪಿ ಜಿಲ್ಲೆ
4. ವಿಘ್ನೇಶ (35) ತಂದೆ: ದಯಾನಂದ ಕೋಟ್ಯಾನ್ ವಾಸ: ಲಕ್ಷ್ಮಿನಗರ 4 ನೇ ಕ್ರಾಸ್, ತೆಂಕನಿಡಿಯೂರು ಗ್ರಾಮ, ಉಡುಪಿ ತಾಲೂಕು ಜಿಲ್ಲೆ.
5. ಬಸವರಾಜು (36), ತಂದೆ: ರಾಮ್ ಸಿಂಗ್, ವಾಸ: ವಿಶ್ರಾಮ್ ಹೋಮ್ ಸ್ಟೇ, ತೊಟ್ಟಾಂ ಚರ್ಚ ಬಳಿ, ತೆಂಕನಿಡಿಯೂರು ಗ್ರಾಮ, ಉಡುಪಿ ತಾಲೂಕು & ಜಿಲ್ಲೆ ಖಾಯಂ ವಾಸ ಮೈನ್ ನಗರ, ಜೋತಾ, ಜರ್‌ಪನ್ನಿರಾ, ಕಠ್ಮಂಡು, ನೇಪಾಳ ದೇಶ
6. ಧನ್ವತ್ ರಿಕೀತ್(36), ತಂದೆ: ಮೋಹನ್ ಪ್ರೇಮ್ ಕುಮಾರ್ ವಾಸ: Euro Living ಅಪಾರ್ಟ್ ಮೆಂಟ್, ಪೆರಂಪಳ್ಳಿ ಚರ್ಚ್ ಎದುರು, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ. ಖಾಯಂ ವಿಳಾಸ: ವಿಲಾಸಿನಿ ನಿಲಯ, ಸಂಮೃದ್ದಿ ನಗರ 2ನೇ ಅಡ್ಡರಸ್ತೆ, ದೆಂದೂರುಕಟ್ಟೆ, ಕಾಪು ತಾಲೂಕು, ಉಡುಪಿ ಜಿಲ್ಲೆ. ಮತ್ತು
7. ಗೀತಾಜಂಲಿ ಜಿನಾ (44), ಗಂಡ: ಬೌರಿ, ವಾಸ: ಬಿರಿಯಾಬಾಟಿಯಾ, ಗಾಂಜಾಂ ಜಿಲ್ಲೆ ಓಡಿಸ್ಸಾ ರಾಜ್ಯ. ಹಾಲಿವಾಸ: ಉರ್ದು ಶಾಲೆ ಬಳಿ, ಹೂಡೆ, ಪಡುತೋನ್ಸೆ ಗ್ರಾಮ,
ಇವರುಗಳನ್ನು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.


