Wednesday, June 3, 2026
HomeUncategorizedಅಯೋಧ್ಯೆ ಸಂಭ್ರಮವನ್ನು ಟಿವಿಯಲ್ಲಿ ನೋಡಿ ಸಂಭ್ರಮಿಸಿದ ಮೋದಿ ತಾಯಿ..

ಅಯೋಧ್ಯೆ ಸಂಭ್ರಮವನ್ನು ಟಿವಿಯಲ್ಲಿ ನೋಡಿ ಸಂಭ್ರಮಿಸಿದ ಮೋದಿ ತಾಯಿ..

- Advertisement -
- Advertisement -

ಗುಜರಾತ್ : ಇವತ್ತು ಭಾರತದ ಇತಿಹಾಸದಲ್ಲಿ ಐತಿಹಾಸಿಕ ದಿನ. ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ಆ ಕ್ಷಣ ಮುಗಿದೇ ಹೋಯ್ತು. ಇಡೀ ಭಾರತವೇ ಈ ಕ್ಷಣವನ್ನು ಟಿವಿಯಲ್ಲಿ ನೋಡಿ ಸಂಭ್ರಮಿಸುತ್ತಿದ್ದರೆ ಮೋದಿ ತವರೂರಲ್ಲಿ ಅದಕ್ಕಿಂತ ಹೆಚ್ಚಿನ ಸಂಭ್ರಮವಿತ್ತು.

ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬಾಯಿ ಈ ಸುಂದರ ಕ್ಷಣಗಳ ನೇರ ಪ್ರಸಾರವನ್ನು ನೋಡಿ ಖುಷಿ ಪಟ್ರು. ಮನೆಯಲ್ಲೇ ಕುಳಿತು ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಿಸಿದ್ರು. ಇನ್ನು ಪ್ರಧಾನಿ ತಾಯಿ ಹೀರಾಬಾಯಿ ಮನೆಯಲ್ಲಿ ಕುಳಿತು ಟಿವಿ ನೋಡುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲಿ ಟಿವಿಯ ದೃಶ್ಯದಲ್ಲಿ ಮೋದಿ ನಮಿಸುತ್ತಿದ್ದರೆ, ಮನೆಯಲ್ಲೇ ಕುಳಿತು ಶಿಲಾನ್ಯಾಸ ಕಾರ್ಯಕ್ರಮ ನೋಡುತ್ತಿದ್ದ ಪ್ರಧಾನಿ ತಾಯಿ ಕೂಡ ಎರಡು ಕೈಗಳು ಜೋಡಿಸಿ ನಮಸ್ಕರಿಸುತ್ತಿರುವ ಫೋಟೋ ವೈರಲ್ ಆಗಿದೆ. ಅಲ್ಲದೇ ಟಿವಿ ಬಳಿಯೇ ರಾಮ, ಲಕ್ಷ್ಮಣ, ಹಾಗೂ ಸೀತೆಯ ಮೂರ್ತಿಯಿರೋದನ್ನು ಕೂಡ ಫೋಟೋದಲ್ಲಿ ಗಮನಿಸಬಹುದು..

- Advertisement -

Latest News

error: Content is protected !!