Thursday, June 4, 2026
Homeಪ್ರಮುಖ-ಸುದ್ದಿಕೊನೆಗೂ ರಾಮನ ಬಗ್ಗೆ ಮೌನ ಮುರಿದ ರಾಹುಲ್ ಗಾಂಧಿ..ಹಾಗಾದ್ರೆ ರಾಹುಲ್ ಹೇಳಿದ್ದೇನು?

ಕೊನೆಗೂ ರಾಮನ ಬಗ್ಗೆ ಮೌನ ಮುರಿದ ರಾಹುಲ್ ಗಾಂಧಿ..ಹಾಗಾದ್ರೆ ರಾಹುಲ್ ಹೇಳಿದ್ದೇನು?

- Advertisement -
- Advertisement -

ನವದೆಹಲಿ : ಇಡೀ ದೇಶದ ಜನರನ್ನೇ ಭಾವುಕರನ್ನಾಗಿಸಿದ ಐತಿಹಾಸಿಕ ಕ್ಷಣಕ್ಕೆ ಇಂದು ಅಯೋಧ್ಯೆ ಸಾಕ್ಷಿಯಾಯಿತು. ದೇಶದ ಮೂಲೆ ಮೂಲೆಯಲ್ಲೂ ರಾಮ ರಾಮ ಅನ್ನೋ ಜಯಘೋಷ ಮೊಳಗಿತು. ಹೀಗಿರುವಾಗಲೇ ರಾಹುಲ್ ಗಾಂಧಿ ತಮಗಿರುವ ರಾಮನ ಬಗೆಗಿನ ತಮ್ಮ ಪ್ರೀತಿಯನ್ನು ಹೊರ ಹಾಕಿದ್ದಾರೆ. “ರಾಮ ಪ್ರೀತಿಯ ಸಂಕೇತ, ಅವ್ರು ಎಂದಿಗೂ ದ್ವೇಷವಲ್ಲ” ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿಸಿದ್ದು, ಕೋಟ್ಯಾಂತರ ಭಾರತೀಯರ ಕನಸು ಸಧ್ಯ ನನಸಾಗಿದೆ. ಇತ್ತಿಚಿಗಷ್ಟೇ ಪ್ರೀಯಾಂಕಾ ವಾದ್ರಾ “ರಾಮ ಎಲ್ಲರ ಹೃದಯದಲ್ಲಿ ಇದ್ದಾನೆ” ಎಂದು ಹೇಳಿದ್ರು. ಈಗ ರಾಹುಲ್‌ ಗಾಂಧಿ ಸರದಿ.

ಹೌದು, ಕೊನೆಗೂ ಮೌನ ಮುರಿದ ರಾಹುಲ್‌ ಗಾಂಧಿ, ರಾಮ ಎಂದರೇ ಪ್ರೀತಿ, ಅವ್ರು ಎಂದಿಗೂ ದ್ವೇಷವಲ್ಲ. ರಾಮ ಎಂದರೇ ಸಹಾನುಭೂತಿ, ಅವ್ರು ಎಂದಿಗೂ ಕ್ರೂರವಾಗಿ ಕಾಣಿಸುವುದಿಲ್ಲ. ರಾಮ ಎಂದರೆ ನ್ಯಾಯ, ಅವರು ಎಂದಿಗೂ ಅನ್ಯಾಯದಲ್ಲಿ ಕಾಣಿಸುವುದಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

- Advertisement -

Latest News

error: Content is protected !!