Thursday, June 4, 2026
Homeಕರಾವಳಿಕಡಬ: ನಕಲಿ ಪಿಸ್ತುಲ್ ಹೊಂದಿದ್ದ ವ್ಯಕ್ತಿಯ ಬಂಧನ

ಕಡಬ: ನಕಲಿ ಪಿಸ್ತುಲ್ ಹೊಂದಿದ್ದ ವ್ಯಕ್ತಿಯ ಬಂಧನ

- Advertisement -
- Advertisement -

ಕಡಬ: ಯಾವುದೇ ಪರವಾನಿಗೆ ಇಲ್ಲದೆ ನಕಲಿ ಪಿಸ್ತುಲ್ ಹೊಂದಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿಯ ಮೇರೆಗೆ ಕಡಬ ಎಸ್. ಐ ರುಕ್ಮ ನಾಯ್ಕ್ ನೇತೃತ್ವದ ಪೊಲೀಸರ ತಂಡ ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಕಡಬ ಗ್ರಾಮದ ಪಾಲೋಳಿಯ ಜನಾರ್ಧನ್ ಗೌಡ ಬಂಧಿತ ಆರೋಪಿ. ಈತನ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು 02 ನಕಲಿ ಪಿಸ್ತೂಲ್ ಮತ್ತು 02 ಖಾಲಿ ತೋಟೆ ಹಾಗೂರಂಜಕ, ಪೊಟ್ಯಾಶಿಯಂ ಕೇಪುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.ಈ ರೀತಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ವಶದಲ್ಲಿ ಇಟ್ಟುಕೊಳ್ಳುವುದು ಕಾನೂನು ಬಾಹಿರ ಅಪರಾಧವಾಗಿದ್ದು ಈತನನ್ನು ಪೊಲೀಸರು ದಸ್ತಗಿರಿ ಮಾಡಿ ವಶಕ್ಕೆ ಪಡಕೊಂಡು ಆತನ ಮೇಲೆ ಶಸ್ತ್ರಾಸ್ತಗಳ ಅಧೀನಿಯಮ ಹಾಗೂ ಸ್ಪೋಟಕಗಳ ಅಧಿನಿಯಮದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಡಬ ಪೊಲೀಸ್ ಠಾಣಾ ಉಪನಿರೀಕ್ಷಕರಾದ ರುಕ್ಮಾ ನಾಯ್ಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎ ಎಸ್. ಐ ಚಿದಾನಂದ ರೈ, ರವಿ, ಎಚ್.ಸಿ ಸ್ಕರಿಯ, ಪಿ ಸಿ ಭವಿತ್ ರೈ, ಶ್ರೀಶೈಲ್, ಮಹೇಶ್ ,ಜೀಪು ಚಾಲಕ ಕನಕರಾಜ್ ಪಾಲ್ಗೊಂಡಿದ್ದರು.

- Advertisement -

Latest News

error: Content is protected !!