Tuesday, June 9, 2026
Homeಕರಾವಳಿಮಂಗಳೂರುಮಂಗಳೂರು; 2020ರಲ್ಲಿ ಮೂಡಬಿದರೆಯ ಖಾಸಗಿ ಕಾಲೇಜಿನಲ್ಲಿ ನಡೆದ ಕೊಲೆ ಪ್ರಕರಣ; ಪ್ರಮುಖ ಆರೋಪಿ ಚಿದಾನಂದ ಪರಶುನಾಯ್ಕರ್...

ಮಂಗಳೂರು; 2020ರಲ್ಲಿ ಮೂಡಬಿದರೆಯ ಖಾಸಗಿ ಕಾಲೇಜಿನಲ್ಲಿ ನಡೆದ ಕೊಲೆ ಪ್ರಕರಣ; ಪ್ರಮುಖ ಆರೋಪಿ ಚಿದಾನಂದ ಪರಶುನಾಯ್ಕರ್ ಗೆ ಜೀವಾವಧಿ ಶಿಕ್ಷೆ

- Advertisement -
- Advertisement -

ಮಂಗಳೂರು; 2020ರಲ್ಲಿ ಮೂಡಬಿದರೆಯ ಖಾಸಗಿ ಕಾಲೇಜಿನಲ್ಲಿ ನಡೆದ ಕೊಲೆ ಪ್ರಕರಣ; ಪ್ರಮುಖ ಆರೋಪಿ ಚಿದಾನಂದ ಪರಶುನಾಯ್ಕರ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶ ನೀಡಿದೆ.

30/10/2020 ರಂದು ತಡರಾತ್ರಿ ಮೂಡಬಿದಿರೆ ಕಾಲೇಜೊಂದರಲ್ಲಿಕೆಲಸ ಮಾಡುತ್ತಿದ್ದ ಚಿದಾನಂದ ಎಂಬಾತ ಪರಶು ನಾಯ್ಕ ಚೇತನ್ ನಿಗೆ ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡ್ ಹಿಡಿದುಕೊಂಡು ಕಾಲೇಜಿನ ವಿಶ್ರಾಂತಿ ಕೊಠಡಿಗೆ ಅಕ್ರಮ ಪ್ರವೇಶ ಮಾಡಿದ್ದ. ಅಲ್ಲಿ ರಾಜೇಶ್ ಪೂಜಾರಿ ಹಾಗೂ ಶಂಕ್ರಪ್ಪ ಎಂಬವರೊಡನೆ ನಿದ್ರಿಸುತ್ತಿದ್ದ ಚೇತನ್ ನನ್ನು ಕಬ್ಬಿಣದ ರಾಡ್ ನಿಂದ ತಲೆಗೆ, ಮುಖಕ್ಕೆ ಹಲ್ಲೆ ಮಾಡಿದ್ದ. ಇದರಿಂದ ಗಂಭೀರ ಗಾಯಗೊಂಡ ಚೇತನ್ 2020 ನವೆಂಬರ್ 9ರಂದು ಮೃತಪಟ್ಟಿದ್ದ. ಪ್ರಕರಣಕ್ಕೆ ಸಂಬಂಧಿಸಿ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶರಾಧ ಜಗದೀಶ ವಿ.ಎನ್ . ಸಮಗ್ರ ವಿಚಾರಣೆ ನಡೆಸಿ ಐಪಿಸಿ ಕಲಂ 448, 506, 302, 201ರಲ್ಲಿಆರೋೕಪಿಯನ್ನು ತಪ್ಪಿತಸ್ಥನೆಂದು ನವೆಂಬರ್ 11ರಂದು ತೀರ್ಪು ನೀಡಿದ್ದಾರೆ. ನವೆಂಬರ್ 13 ರಂದು ಆರೋಪಿಗೆ ದಂಡ ಸಹಿತ ಜೀವಾವಾಧಿ ಶಿಕ್ಷೆ ನೀಡಿದ್ದಾರೆ. ಸರಕಾರದ ಪರ ಸರಕಾರಿ ಅಭಿಯೋಜಕರಾದ ಜ್ಯೋತಿ ನಾಯಕ್ ವಾದಿಸಿದ್ದರು. ಪೊಲೀಸ್ ನಿರೀಕ್ಷಕರಾದ ಬಿ.ಎಸ್ . ದಿನೇಶ್ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

- Advertisement -

Latest News

error: Content is protected !!