- Advertisement -
![]()
- Advertisement -
ಉಡುಪಿ: ಭಗವದ್ಗೀತೆ ಕೇವಲ ನ್ಯಾಯಾಲಯದಲ್ಲಿ ಇರಿಸುವ ಗ್ರಂಥವಲ್ಲ ಬದಲಾಗಿ ಹೃದಯದಲ್ಲಿರಿಸುವ ಗ್ರಂಥ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀಈಶವಿಠಲದಾಸ ಸ್ವಾಮೀಜಿ ಹೇಳಿದರು.
ಪ್ರತಿಯೊಬ್ಬ ವ್ಯಕ್ತಿಯು ಭಗವದ್ಗೀತೆಯನ್ನು ಓದಿದರೆ ಸಾಲದು ಅದರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇನ್ನು ಜಗತ್ತಿನ ಮೊದಲ ಮನೋವಿಜ್ಞಾನ ಗ್ರಂಥ ಭಗವದ್ಗೀತೆಯಾಗಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ವಹಿಸಿದ್ದರು. ಈ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಶ್ರೀಮಠದ ಕಾರ್ಯದರ್ಶಿ ವಿದ್ವಾನ್ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು.
- Advertisement -


