Wednesday, June 3, 2026
Homeತಾಜಾ ಸುದ್ದಿಬಾಲಿವುಡ್‌ ನಟಿ ಕಾಮಿನಿ ಕೌಶಲ್‌ ವಿಧಿವಶ

ಬಾಲಿವುಡ್‌ ನಟಿ ಕಾಮಿನಿ ಕೌಶಲ್‌ ವಿಧಿವಶ

- Advertisement -
- Advertisement -

ಬಾಲಿವುಡ್ ಸಿನಿಮಾರಂಗದಲ್ಲಿ 7 ದಶಕಗಳ ಕಾಲ ಕಲಾ ಸೇವೆಯನ್ನು ಸಲ್ಲಿಸಿದ ನಟಿ ಕಾಮಿನಿ ಕೌಶಾಲ್ ನಿಧನ ಹೊಂದಿದ್ದಾರೆ.

98 ವರ್ಷದ ಹಿರಿಯ ನಟಿ ಕಾಮಿನಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶುಕ್ರವಾರ (ನ.14) ನಟಿ ವಿಧಿವಶರಾಗಿದ್ದಾರೆ. 1946ರಲ್ಲಿ ತೆರೆಕಂಡ ನೀಚಾ ನಗರ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕಾಮಿನಿ ಕೌಶಾಲ್ 70 ವರ್ಷದ ಚಿತ್ರರಂಗದಲ್ಲಿ ಹಲವು ರೀತಿಯ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಕಾಮಿನಿ ಕೌಶಾಲ್ ಧೋ ಭಾಯಿ, ಜಿದ್ದಿ, ಶಬ್ನಮ್, ನಮೂನಾ, ಝಂಜಾರ್, ಬಡೆ ಸರ್ಕಾರ್, ನೈಟ್ ಕ್ಲಬ್, ಗೋದಾನ್, ಪ್ರೇಮ್ ನಗರ್, ಮಹಾ ಚೋರ್ ಮುಂತಾದ ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮದೇ ಛಾಪು ಮೂಡಿಸಿದ್ದರು. ಅಂದಹಾಗೆ ಕಾಮಿನಿ ಕೌಶಾಲ್ ಮೂಲ ಹೆಸರು ಉಮಾ ಕಶ್ಯಪ್. ಸಿನಿಮಾ ರಂಗಕ್ಕೆ ಬಂದ ಬಳಿಕ ಕಾಮಿನಿ ಕೌಶಾಲ್ ಆಗಿದ್ದರು.

- Advertisement -

Latest News

error: Content is protected !!