Sunday, June 14, 2026
Homeಕ್ರೀಡೆಆರ್.ಸಿ.ಬಿ ವಿಜಯೋತ್ಸವ ಕಾಲ್ತುಳಿತ ಪ್ರಕರಣ; ಆರ್‌ಸಿಬಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸಿದ್ಧತೆ

ಆರ್.ಸಿ.ಬಿ ವಿಜಯೋತ್ಸವ ಕಾಲ್ತುಳಿತ ಪ್ರಕರಣ; ಆರ್‌ಸಿಬಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸಿದ್ಧತೆ

- Advertisement -
- Advertisement -

ಬೆಂಗಳೂರು: ಆರ್.ಸಿ.ಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿದ್ದು, ಖಾಸಗಿ ಸಂಸ್ಥೆಗಳಾದ ಆರ್.ಸಿ.ಬಿ, ಕರ್ನಾಟಕ ರಾಜ್ಯಕ್ರಿಕೆಟ್ ಸಂಸ್ಥೆ, ಡಿಎನ್‍ಎ ಸಂಸ್ಥೆಗಳ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಹಾಗೂ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನ್ಯಾ.ಮೈಕಲ್ ಕುನ್ಹಾ ಅವರು ನೀಡಿರುವ ವರದಿಯನ್ನು ರಾಜ್ಯಸರ್ಕಾರ ಒಪ್ಪಿಕೊಂಡಿದೆ. ವರದಿಯ ಬಗ್ಗೆ ಚರ್ಚೆಯಾಗಿದ್ದು, ನ್ಯಾಯಮೂರ್ತಿಗಳು ಶಿಫಾರಸ್ಸು ಮಾಡಿದಂತೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಸಂಪುಟ ಸಹಮತಿಸಿದೆ ಎಂದರು.

ಇನ್ನು ಆರ್.ಸಿ.ಬಿ ವಿಜಯೋತ್ಸವದ ವೇಳೆಯಲ್ಲಿ ಕರ್ತವ್ಯ ಲೋಪ ಎಸಗಿದ ಸರ್ಕಾರಿ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗುವುದು. ಖಾಸಗಿ ಸಂಸ್ಥೆಗಳಾದ ಆರ್.ಸಿ.ಬಿ, ಕರ್ನಾಟಕ ರಾಜ್ಯಕ್ರಿಕೆಟ್ ಸಂಸ್ಥೆ, ಡಿಎನ್‍ಎ ಸಂಸ್ಥೆಗಳ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಹಾಗೂ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದಾಗಿ ಸಚಿವರು ತಿಳಿಸಿದರು.

- Advertisement -

Latest News

error: Content is protected !!