Tuesday, June 9, 2026
HomeWorld49 ಜನ ಪ್ರಯಾಣಿಕರನ್ನ ಹೊತ್ತು ಸಾಗುತ್ತಿದ್ದ ರಷ್ಯಾದ ವಿಮಾನ ಪತನ

49 ಜನ ಪ್ರಯಾಣಿಕರನ್ನ ಹೊತ್ತು ಸಾಗುತ್ತಿದ್ದ ರಷ್ಯಾದ ವಿಮಾನ ಪತನ

- Advertisement -
- Advertisement -

ಮಾಸ್ಕೋ: ಸೈಬೀರಿಯಾ ಮೂಲದ ಅಂಗಾರ ಎಂಬ ವಿಮಾನಯಾನ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿದ್ದ AN-24 ಸಂಖ್ಯೆಯ ವಿಮಾನವು 49 ಜನ ಪ್ರಯಾಣಿಕರನ್ನ ಹೊತ್ತು ಸಾಗುತ್ತಿದ್ದು, ಕೆಲವೇ ಸಮಯದಲ್ಲಿ ಆ ವಿಮಾನವು ರಾಡಾರ್ ಕಣ್ಗಾವಲಿನಿಂದ ಕಣ್ಮರೆಯಾಗಿತ್ತು. ಇದೀಗ ನಾಪತ್ತೆಯಾಗಿದೆ ಎನ್ನಲಾದ ವಿಮಾನದ ಅವಶೇಷಗಳು ಪತ್ತೆಯಾಗಿದೆ. ಇದರಿಂದಾಗಿ ವಿಮಾನ ಪತನಗೊಂಡಿರುವುದು ದೃಢಪಟ್ಟಿದೆ.

ಬೆಳಗ್ಗೆ 7.30ರ ಸುಮಾರಿಗೆ ಖಬರೋವ್ಸ್ಕ್‌ನಿಂದ ಹೊರಟಿರುವ ಈ ವಿಮಾನವು ಚೀನಾದ ಗಡಿಯಲ್ಲಿರುವ ಅಮುರ್ ಪ್ರದೇಶದ ಟಿಂಡಾ ಪಟ್ಟಣದ ಬಳಿ ರಾಡಾರ್‌ನಿಂದ ಸಂಪರ್ಕ ಕಳೆದುಕೊಂಡಿತು. ಇದಾದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿರುವುದು ತಿಳಿದುಬಂದಿದೆ. ಇನ್ನು ರಷ್ಯಾ ಮೂಲದ ಈ ವಿಮಾನದಲ್ಲಿ ಐದು ಮಕ್ಕಳು ಸೇರಿದಂತೆ 43 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು ಎಂದು ಪ್ರಾದೇಶಿಕ ವಾಸಿಲಿ ಓರ್ಲೋವ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ವಿಮಾನವು ಖಬರೋವ್ಸ್ಕ್-ಬ್ಲಾಗೊವೆಶ್‌ಚೆನ್ಸ್ಕ್-ಟಿಂಡಾ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಟಿಂಡಾ ಮಾಸ್ಕೋದಿಂದ ಸುಮಾರು 6,600 ಕಿ.ಮೀ ಪೂರ್ವದಲ್ಲಿದೆ.

- Advertisement -

Latest News

error: Content is protected !!