Saturday, June 6, 2026
Homeಕರಾವಳಿಮಂಗಳೂರುಮಂಗಳೂರು: ಡಿಗ್ರಿ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹ*ತ್ಯೆ

ಮಂಗಳೂರು: ಡಿಗ್ರಿ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹ*ತ್ಯೆ

- Advertisement -
- Advertisement -

ಮಂಗಳೂರು: ಡಿಗ್ರಿ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹ*ತ್ಯೆಗೆ ಶರಣಾಗಿರುವ ಘಟನೆ  ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆ ಎಂಬಲ್ಲಿ ನಡೆದಿದೆ.  ದಾಮಸ್ ಕಟ್ಟೆ ನಿವಾಸಿ ಜೆಸ್ಲಿಟಾ ಸೆರಾವೋ ( 21) ಮೃತ ವಿದ್ಯಾರ್ಥಿನಿ.

ಮೃತ ಜೆಸ್ಲಿಟಾ ಸೆರಾವೋ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಡಿಗ್ರಿ ಅಂತಿಮ ವರ್ಷದ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಮಂಗಳವಾರ ಕಾಲೇಜಿಗೆ ರಜೆ ಮಾಡಿ ಮನೆಯಲ್ಲಿದ್ದರು. ಬೆಳಗ್ಗಿನ ಜಾವ ಹೆತ್ತವರು ಪಕ್ಷಿಕೆರೆ ಚರ್ಚ್‌‌ಗೆ ಪ್ರಾರ್ಥನೆಗೆ ಹೋದ ಸಮಯದಲ್ಲಿ ಈಕೆ ತನ್ನ ಕೋಣೆಯ ಫ್ಯಾನ್ ಗೆ ಚೂಡಿದಾರ್ ಶಾಲ್‌ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಮನೆಯವರು ಚರ್ಚ್‌ನಿಂದ ವಾಪಸ್ ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಪ್ರಕರಣ ಬಯಲಿಗೆ ಬಂದಿದ್ದು, ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜೆಸ್ಲಿಟಾ ತಂದೆ ತಾಯಿ ಮತ್ತು ಅಣ್ಣನನ್ನು ಅಗಲಿದ್ದಾರೆ.

- Advertisement -

Latest News

error: Content is protected !!