Monday, June 15, 2026
Homeಅಪರಾಧನಟ ಸೈಫ್‌ ಅಲಿಖಾನ್‌ ಮೇಲೆ ದಾಳಿ ಪ್ರಕರಣ ; ಓರ್ವ ಆರೋಪಿ ಪೊಲೀಸ್ ವಶಕ್ಕೆ

ನಟ ಸೈಫ್‌ ಅಲಿಖಾನ್‌ ಮೇಲೆ ದಾಳಿ ಪ್ರಕರಣ ; ಓರ್ವ ಆರೋಪಿ ಪೊಲೀಸ್ ವಶಕ್ಕೆ

- Advertisement -
- Advertisement -

ಮುಂಬಯಿ: ಬಾಲಿವುಡ್‌ ನಟ ಸೈಫ್‌ ಅಲಿಖಾನ್‌ ಮೇಲಿನ ದಾಳಿ ನಡೆಸಿದ ಪ್ರಕರಣ ಸಂಬಂಧ ಇದೀಗ ಮುಂಬೈ ನಗರ ಪೊಲೀಸರು ಓರ್ವ ಆರೋಪಿಯನ್ನು ಶುಕ್ರವಾರ(ಜ.17ರಂದು) ಬಂಧಿಸಿ ಬಾಂದ್ರಾ ಠಾಣೆಗೆ ಕರೆತಂದಿದ್ದಾರೆ ಎಂದು ವರದಿಯಾಗಿದೆ.

ಇನ್ನು ಪೊಲೀಸರಿಂದ ಬಂದಂತಹ ಪ್ರಾಥಮಿಕ ಮಾಹಿತಿ ಪ್ರಕಾರ ನಟನ ಮೇಲೆ ಹಲ್ಲೆ ನಡೆದಿದ್ದು ದರೋಡೆ ನಡೆಸಲು ಆಗಿರುವ ಕೃತ್ಯವೆಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಸದ್ಯ ಖಾಕಿ ವಶದಲ್ಲಿರುವ ಆರೋಪಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ತೆಗೆದುಕೊಂಡಿದ್ದು, ಕೃತ್ಯದ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.

ಸಿಸಿಟಿವಿಯಲ್ಲಿ ಶಂಕಿತ ಆರೋಪಿಯ ಚಲನಚಲನ ಸೆರೆಯಾಗಿದ್ದು, ವ್ಯಕ್ತಿಯೊಬ್ಬ ಬೆನ್ನ ಹಿಂದೆ ಬ್ಯಾಗ್‌ ಹಾಕಿಕೊಂಡು ಮೆಟ್ಟಿಲುಗಳ ಕೆಳಗೆ ಇಳಿಯುವುದು ಕಂಡುಬಂದಿದೆ. ಫೈರ್‌ ಎಕ್ಸಿಟ್‌ ದಾರಿಯಲ್ಲಿ ಆರೋಪಿ ಕೆಳಗೆ ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು. 

ಮುಂಬೈಯ ಲೀಲಾವತಿ ಆಸ್ಪತ್ರೆಯಲ್ಲಿ ಗುರುವಾರ ತಜ್ಞ ವೈದ್ಯರಿಂದ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಬಾಲಿವುಡ್ ನಟ ಅಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!