Thursday, June 4, 2026
Homeಅಪರಾಧವೃದ್ಧೆಯ 1.35 ಕೋಟಿ ರೂ. ಬಚಾವ್‌ ಮಾಡಿದ ಬ್ಯಾಂಕ್‌ ಮ್ಯಾನೇಜರ್‌ 

ವೃದ್ಧೆಯ 1.35 ಕೋಟಿ ರೂ. ಬಚಾವ್‌ ಮಾಡಿದ ಬ್ಯಾಂಕ್‌ ಮ್ಯಾನೇಜರ್‌ 

- Advertisement -
- Advertisement -

ಮಂಗಳೂರು: ಇಲ್ಲಿನ ವೃದ್ದೆಯೊಬ್ಬರು ಬ್ಯಾಂಕ್‌ನಲ್ಲಿ ದೊಡ್ಡ ಮೊತ್ತದ ಠೇವಣಿ ಇರಿಸಿದ್ದು, ಇವರನ್ನ ಯಮಾರಿಸಿ  1.35 ಕೋಟಿ ರೂ.ಗಳನ್ನು ಕನ್ನ ಹಾಕಲು ಸೈಬರ್ ಖದೀಮರು ಹೊರಟಿದ್ದು, ಖದೀಮರಿಗೆ ಬ್ಯಾಂಕ್ ಮ್ಯಾನೇಜರ್ ಚಳ್ಳೆಹಣ್ಣು ತಿನ್ನಿಸಿದ ಘಟನೆ ನಡೆದಿದೆ.

ಬ್ಯಾಂಕ್‌ನಲ್ಲಿ ದೊಡ್ಡ ಮೊತ್ತದ ಠೇವಣಿ ಇರಿಸಿದ್ದ ವಯೋವೃದ್ಧೆಬ್ಬರಿಗೆ “ನಿಮ್ಮ ಡೆಬಿಟ್‌ ಕಾರ್ಡ್‌ ಅಕ್ರಮ ಹಣ ವರ್ಗಾವಣೆಗೆ ಬಳಕೆಯಾಗಿದೆ’ ಎಂದು ಸೈಬರ್‌ ಅರೆಸ್ಟ್‌ಗೆ ಸೈಬರ್ ಖದೀಮರು ಪ್ರಯತ್ನಿಸಿದ್ದಾರೆ. ವೃದ್ಧೆ ಎದರಿ ಬ್ಯಾಂಕಿಗೆ ಧಾವಿಸಿದ್ದು,  ತಾನು ಠೇವಣಿ ಇರಿಸಿದ ಹಣವನ್ನು ಕೂಡಲೇ ಮರಳಿಸುವಂತೆ ಬ್ಯಾಂಕ್‌ನವರಲ್ಲಿ ವಿನಂತಿಸಿದ್ದಾರೆ.

ಈ ವೇಳೆಯಲ್ಲಿ ವೃದ್ಧೆಯ ಗಡಿಬಿಡಿ, ಆತಂಕದೊಂದಿಗೆ ಆಕೆ ಪದೇ ಪದೆ ಯಾರೊಂದಿಗೋ ಕರೆಯಲ್ಲಿ ನಿರತರಾಗಿರುವುದನ್ನು ಗಮನಿಸಿದ ಎಚ್‌ಡಿಎಫ್‌ಸಿ ಬ್ಯಾಂಕ್‌ ಮಂಗಳೂರು ಕಂಕನಾಡಿ ಶಾಖಾ ವ್ಯವಸ್ಥಾಪಕರು ಏನೋ ಎಡವಟ್ಟಾಗಿದೆ ಎಂದು ಖಚಿತಪಡಿಸಿಕೊಂಡು, ಎಲ್ಲವನ್ನೂ ವೃದ್ಧೆಯ ಬಳಿ ಕೇಳಿ ತಿಳಿದುಕೊಂಡು ಆಕೆಯನ್ನು ವಂಚಕರ ಕಪಿಮುಷ್ಠಿಯಿಂದ ಬಚಾವ್‌ ಮಾಡಿದ್ದಾರೆ.

ನಂತರದಲ್ಲಿ ಮ್ಯಾನೇಜರ್‌ ಮಂಗಳೂರಿನ ನಗರದ ಸೈಬರ್‌ ಪೊಲೀಸರಿಗೆ ಮಾಹಿತಿ ನೀಡಿದರು. ಅಲ್ಲದೆ ಆ ನಂಬರ್‌ ಬ್ಲಾಕ್‌ ಮಾಡಿಸಿ ವೃದ್ಧೆಗೆ ನೆರವಾಗಿದ್ದಾರೆ.

- Advertisement -

Latest News

error: Content is protected !!