Thursday, June 4, 2026
Homeಕರಾವಳಿಉಡುಪಿ: ಗಾಂಜಾ ನಶೆಯಲ್ಲಿ ಗುಂಪಿನಿಂದ ದಂಪತಿ ಮೇಲೆ ಹಲ್ಲೆ ಆರೋಪ

ಉಡುಪಿ: ಗಾಂಜಾ ನಶೆಯಲ್ಲಿ ಗುಂಪಿನಿಂದ ದಂಪತಿ ಮೇಲೆ ಹಲ್ಲೆ ಆರೋಪ

- Advertisement -
- Advertisement -

ಉಡುಪಿ: ಗಾಂಜಾ ನಶೆಯಲ್ಲಿದ್ದ ಗುಂಪಿನಿಂದ ದಂಪತಿಗಳ ಮೇಲೆ ಹಲ್ಲೆ ನಡೆಸಿರುವ ಆರೋಪ ವ್ಯಕ್ತವಾಗಿದೆ.

ಮಲ್ಪೆ ಬೀಚ್ ಸಮೀಪದಲ್ಲಿ ಘಟನೆ ನಡೆದಿದ್ದು,ಬೈಕ್ ಪಾರ್ಕಿಂಗ್ ವಿಚಾರದಲ್ಲಿ ವಾಗ್ವಾದ ಉಂಟಾಗಿ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.

ಶೇಖರ್ ತಿಂಗಳಾಯ ಮತ್ತು ಗೀತಾ ಎಂಬ ದಂಪತಿ ಮೇಲೆ
ಸಾಗರ್, ಚರಣ್, ಯಶವಂತ್, ಕಿಶೋರ್ ಮತ್ತು ರಾಜ ಎಂಬವರು ಹಲ್ಲೆ ನಡೆಸಿರುವ ಆರೋಪ ವ್ಯಕ್ತವಾಗಿದೆ.

ಸಿಸಿ ಕ್ಯಾಮರದಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿದ್ದು, ಹಲ್ಲೆಗೊಳಗಾದ ದಂಪತಿ ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಲ್ಪೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

- Advertisement -

Latest News

error: Content is protected !!