Sunday, June 7, 2026
Homeಕರಾವಳಿಮಂಗಳೂರುಸಿಎಂ ಜಿಲ್ಲಾ ಪ್ರವಾಸದಲ್ಲಿರುವಾಗಲೇ ದ.ಕ. ಜಿಲ್ಲೆಯಲ್ಲಿ ಬ್ಯಾಂಕ್ ದರೋಡೆ

ಸಿಎಂ ಜಿಲ್ಲಾ ಪ್ರವಾಸದಲ್ಲಿರುವಾಗಲೇ ದ.ಕ. ಜಿಲ್ಲೆಯಲ್ಲಿ ಬ್ಯಾಂಕ್ ದರೋಡೆ

- Advertisement -
- Advertisement -

ಉಳ್ಳಾಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಪ್ರವಾಸದಲ್ಲಿ ಇರುವಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ದರೋಡೆ ನಡೆದಿದೆ.

ಉಳ್ಳಾಲ ತಾಲೂಕಿನ ಕೋಟೆಕಾರು ಬ್ಯಾಂಕ್ ಕೆ.ಸಿ. ರೋಡ್ ಶಾಖೆಯಲ್ಲಿ ಹಾಡ ಹಗಲೇ ದರೋಡೆ ಮಾಡಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಸುಮಾರು ಹತ್ತು ಕೋಟಿಯಷ್ಟು ಚಿನ್ನಾಭರಣ ಮತ್ತು ನಗದು ಕಳವು ಮಾಡಲ್ಪಟ್ಟಿದೆ ಎಂದು ಹೇಳಲಾಗಿದೆ.

ಫಿಯೆಟ್ ಕಾರಿನಲ್ಲಿ ಬಂದಿದ್ದ ಐದು ಜನ ಅಪರಿಚಿತರು ಬಂದೂಕು ತೋರಿಸಿ ದರೋಡೆ ನಡೆಸಿದ್ದಾರೆ‌. ಬ್ಯಾಂಕ್ ನಿಂದ ಚಿನ್ನ ಹಾಗೂ ನಗದು ಕಳವು ಮಾಡಿಕೊಂಡು ದರೋಡೆಕೋರರ ತಂಡ ಮಂಗಳೂರು ಕಡೆಗೆ ಪರಾರಿಯಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಉಳ್ಳಾಲ ಠಾಣೆ ಪೊಲೀಸರು ಭೇಟಿ ನೀಡಿದ್ದು, ವಿಧಾನಸಭೆ‌ ಸ್ಪೀಕರ್ ಯು.ಟಿ. ಖಾದರ್ ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ಪೊಲೀಸರು ಸಿಎಂ ಭದ್ರತೆಯಲ್ಲಿ ಬ್ಯುಸಿಯಾಗಿದ್ದ ಕಾರಣ ಸಮಯ ಸಾಧಿಸಿ ದರೋಡೆ ನಡೆದಿದೆ ಎಂದು ಶಂಕಿಸಲಾಗಿದೆ.

- Advertisement -

Latest News

error: Content is protected !!