Friday, June 5, 2026
Homeಕರಾವಳಿಸುಳ್ಯ; ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿದ್ದಾಗ ಮಹಿಳೆಯೊಬ್ಬರ ಫೋಟೋ ತೆಗೆದು ಪರಾರಿಯಾದ ನೀಚ

ಸುಳ್ಯ; ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿದ್ದಾಗ ಮಹಿಳೆಯೊಬ್ಬರ ಫೋಟೋ ತೆಗೆದು ಪರಾರಿಯಾದ ನೀಚ

- Advertisement -
- Advertisement -

ಸುಳ್ಯ; ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿದ್ದಾಗ ಮಹಿಳೆಯೊಬ್ಬರ ಫೋಟೋ ತೆಗೆದು ನೀಚನೊಬ್ಬ ಪರಾರಿಯಾದ ಘಟನೆ ಜನವರಿ 4 ರಂದು ರಾತ್ರಿ ನಡೆದಿದೆ.

ಸುಳ್ಯ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿ ಮಹಿಳೆಯೊಬ್ಬರು ಇದ್ದಾಗ ಕಿಟಕಿ ಮೂಲಕ ಯಾರೋ ಪಾಪಿ ಫೋಟೋ ತೆಗೆದು ಪರಾರಿಯಾಗಿದ್ದಾನೆ. ಶೌಚಾಲಯದ ಒಂದು ಭಾಗದ ಕಿಟಕಿಯ ಗ್ಲಾಸ್ ಸರಿದಿದ್ದು ಸರಿದ ಭಾಗದಿಂದ ಫೋಟೋವನ್ನು ಕ್ಲಿಕ್ಕಿಸಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ.

ಮಹಿಳೆ ಈ ಘಟನೆಯನ್ನು ಮತ್ತು ಆತನ ಕೈಯನ್ನು ನೋಡಿದ್ದು ಈ ಸಂಧರ್ಭ ಮಹಿಳೆ ಜೋರಾಗಿ ಕಿರುಚಿಕೊಂಡಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಮಹಿಳೆ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!