- Advertisement -
![]()
- Advertisement -
ಕಾಸರಗೋಡು: ಕಾಲೇಜಿಗೆ ಶೂ ಧರಿಸಿ ಬಂದಿದ್ದಕ್ಕೆ ಸೀನಿಯರ್ ವಿದ್ಯಾರ್ಥಿಗಳು ರ್ಯಾಗಿಂಗ್ ನಡೆಸಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಕಾಸರಗೋಡಿನ ಚಿತ್ತಾರಿ ಜಮಾತ್ ಹೈಯರಿ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಪ್ರಥಮ ಪಿಯುಸಿ ವಿದ್ಯಾರ್ಥಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹೊಡೆದಿದ್ದಾರೆ ಎಂದು ಹೇಳಲಾಗಿದೆ.
ಬಿಲಾಲ್ ಎಂಬ ವಿದ್ಯಾರ್ಥಿಗೆ ರ್ಯಾಗಿಂಗ್ ನಡೆಸಿರುವ ವಿದ್ಯಾರ್ಥಿಗಳು ಶೂ ಧರಿಸಿದ್ದಕ್ಕಾಗಿ ಹಾಡುವಂತೆ ಒತ್ತಾಯಿಸಿದ್ದಾರೆ. ಆದರೆ ವಿದ್ಯಾರ್ಥಿ ಹಾಡಲು ನಿರಾಕರಿಸಿದಾಗ ಥಳಿಸಿದ್ದಾರೆ ಎನ್ನಲಾಗಿದೆ.
ಹಲ್ಲೆಯಿಂದಾಗಿ ಬಿಲಾಲ್ ಕಿವಿ ಮತ್ತು ಕಣ್ಣಿಗೆ ಹಾನಿ ಉಂಟಾಗಿದ್ದು, ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


