Thursday, June 4, 2026
Homeತಾಜಾ ಸುದ್ದಿನಿನ್ನೆ ಶಾಸಕರಿಗೆ.. ಇಂದು ಸಂಸದೆಗೆ ಕೊರೊನಾ ಪಾಸಿಟಿವ್.. ಆತಂಕದಲ್ಲಿ ಜನತೆ..

ನಿನ್ನೆ ಶಾಸಕರಿಗೆ.. ಇಂದು ಸಂಸದೆಗೆ ಕೊರೊನಾ ಪಾಸಿಟಿವ್.. ಆತಂಕದಲ್ಲಿ ಜನತೆ..

- Advertisement -
- Advertisement -

ಕೊಲ್ಕೊತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ಕುರಿತು ಸ್ವತಃ ಅವರೇ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಇದನ್ನು ಖಚಿತಪಡಿಸಿದ್ದಾರೆ.

ನಟಿಯೂ ಆಗಿರುವ ಲಾಕೆಟ್ ಚಟರ್ಜಿ, ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಕಾರಣ ಮನೆಯಲ್ಲಿಯೇ ಐಸೋಲೇಶನ್ ನಲ್ಲಿ ಇದ್ದರು. ಅವರಿಗೆ ಕೊರೊನಾ ಟೆಸ್ಟ್ ಮಾಡಿದ್ದು, ಶುಕ್ರವಾರದಂದು ಫಲಿತಾಂಶ ಹೊರಬಿದ್ದ ವೇಳೆ ಪಾಸಿಟಿವ್ ಎಂಬುದು ತಿಳಿದುಬಂದಿದೆ.

ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಲಾಕೆಟ್ ಚಟರ್ಜಿ ಕಳೆದ ಹದಿನೈದು ದಿನಗಳ ಅವಧಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಅವರಿಗೆ ಕೊರೊನಾ ಸೋಂಕು ತಗಲಿರಬಹುದು ಎಂದು ಹೇಳಲಾಗಿದೆ.

- Advertisement -

Latest News

error: Content is protected !!