Saturday, June 6, 2026
Homeಇತರಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗಿನವರೆಗೂ ಕೆಎಸ್ ಆರ್ ಟಿಸಿ ಬಸ್ ಗಳ ಸಂಚಾರವಿಲ್ಲ- ಕೆಎಸ್...

ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗಿನವರೆಗೂ ಕೆಎಸ್ ಆರ್ ಟಿಸಿ ಬಸ್ ಗಳ ಸಂಚಾರವಿಲ್ಲ- ಕೆಎಸ್ ಆರ್ ಟಿಸಿ ಪ್ರಕಟಣೆ

- Advertisement -
- Advertisement -

ಬೆಂಗಳೂರು :  ಕೊರೋನಾ ಸೋಂಕಿನ ಸರಣಿಯನ್ನು ಮುರಿಯಲು ಭಾನುವಾರ ಲಾಕ್ ಡೌನ್ ಅವಶ್ಯಕ ಎಂದು ರಾಜ್ಯ ಸರ್ಕಾರ ಭಾನುವಾರದಂದು ಲಾಕ್ ಡೌನ್ ಘೋಷಿಸಿದೆ. ಹಾಗಾಗಿ ಆ ದಿನ ಕೆಎಸ್ ಆರ್ ಟಿಸಿ ಬಸ್ ಗಳ ಸಂಚಾರವಿರೋದಿಲ್ಲ ಅಂತಾ ಕೆಎಸ್ ಆರ್ ಟಿಸಿ ಉನ್ನತ ಮೂಲಗಳು ಮಾಹಿತಿ ನೀಡಿವೆ. ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆಯವರೆಗೂ ಕೆಎಸ್ ಆರ್ ಟಿಸಿ ಬಸ್ ಗಳು ಸಂಚಾರ ಮಾಡುವುದಿಲ್ಲ ಎಂದು ಕೆಎಸ್ ಆರ್ ಟಿಸಿ ಸಂಸ್ಥೆಯಿಂದ ಮಾಹಿತಿ ನೀಡಲಾಗಿದೆ.

ಹಾಗಾಗಿ ಭಾನುವಾರ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಸಂಚಾರ ಮಾಡುವ ಪ್ಲ್ಯಾನ್ ಏನಾದ್ರೂ ಮಾಡಿಕೊಂಡಿದ್ದರೆ ಅಂತಹವರು ತಮ್ಮ ಪ್ಲ್ಯಾನ್ ಗಳನ್ನು ಬದಲಾಯಿಸಿಕೊಳ್ಳೋದು ಉತ್ತಮ. ಆದರೆ ಶನಿವಾರ ಹಾಗೂ ಸೋಮವಾರ ಬಸ್ ಗಳು ಎಂದಿನಂತೆ ಕಾರ್ಯಾಚರಣೆ ನಡೆಸಲಿವೆ.

- Advertisement -

Latest News

error: Content is protected !!