Sunday, June 14, 2026
Homeತಾಜಾ ಸುದ್ದಿಮೋದಿಯವರ ಗ್ಯಾರಂಟಿಗೆ ಝೀರೋ ವ್ಯಾರಂಟಿ ಎಂದು ಲೇವಡಿ ಮಾಡಿದ ಅಭಿಷೇಕ್ ಬ್ಯಾನರ್ಜಿ

ಮೋದಿಯವರ ಗ್ಯಾರಂಟಿಗೆ ಝೀರೋ ವ್ಯಾರಂಟಿ ಎಂದು ಲೇವಡಿ ಮಾಡಿದ ಅಭಿಷೇಕ್ ಬ್ಯಾನರ್ಜಿ

- Advertisement -
- Advertisement -

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ನ ನಾಯಕ ಅಭಿಷೇಕ್ ಬ್ಯಾನರ್ಜಿ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ‘ಜನ ಘರ್ಜನ್‌ ಸಭಾ’ ರ್‍ಯಾಲಿಯಲ್ಲಿ ಮೋದಿಯವರ ಗ್ಯಾರಂಟಿಗೆ ಝೀರೋ ವ್ಯಾರಂಟಿ ಎಂದು ಲೇವಡಿ ಮಾಡಿದ್ದಾರೆ.

ಅವರು ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ‘ರಾಜ್ಯ ಬಿಜೆಪಿ ನಾಯಕರು ಬಂಗಾಳ ವಿರೋಧಿಗಳು. ರಾಜ್ಯದ ಹಣವನ್ನು ತಡೆಹಿಡಿದಿರುವ ಕೇಸರಿ ಪಾಳ್ಯಕ್ಕೆ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಗುಡುಗಿದರು.

‘ತೃಣಮೂಲ ಕಾಂಗ್ರೆಸ್‌ ಪಕ್ಷ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತಿದೆ. ಆದರೆ ಬಿಜೆಪಿ ಮತ್ತು ಅದರ ನಾಯಕರು ಹೊರಗಿನವರಾಗಿದ್ದು, ಬಂಗಾಳ ವಿರೋಧಿಗಳಾಗಿದ್ದಾರೆ. ಅದಕ್ಕಾಗಿಯೇ ಅವರು ರಾಜ್ಯಕ್ಕೆ ನೀಡಬೇಕಾದ ಹಣವನ್ನು ತಡೆಹಿಡಿದಿದ್ದಾರೆ,’ ಎಂದು ಹೇಳಿದರು.

ಲೋಕಸಭಾ ಚುನಾವಣಾ ಪ್ರಚಾರಕ್ಕೆ ಇಂದು ಚಾಲನೆ ನೀಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಲ್ಲ ಕ್ಷೇತ್ರಗಳಲ್ಲಿಯೂ ಗೆಲ್ಲುವ ಭರವಸೆ ವ್ಯಕ್ತಪಡಿಸಿದರು.

- Advertisement -

Latest News

error: Content is protected !!