Friday, June 5, 2026
Homeಕರಾವಳಿಉಡುಪಿಉಡುಪಿ: ಶ್ರಾದ್ದ ಕಾರ್ಯದ ಪೂಜೆ ಬೇರೆಯವರಿಗೆ ನೀಡಿದ್ದಕ್ಕೆ ಮನೆಗೆ ನುಗ್ಗಿ ರಂಪಾಟ ನಡೆಸಿದ ಅರ್ಚಕ!

ಉಡುಪಿ: ಶ್ರಾದ್ದ ಕಾರ್ಯದ ಪೂಜೆ ಬೇರೆಯವರಿಗೆ ನೀಡಿದ್ದಕ್ಕೆ ಮನೆಗೆ ನುಗ್ಗಿ ರಂಪಾಟ ನಡೆಸಿದ ಅರ್ಚಕ!

- Advertisement -
- Advertisement -

ಉಡುಪಿ: ಮೃತರ ಶ್ರಾದ್ಧ ಕಾರ್ಯದ ಪೂಜೆ ತನಗೆ ನೀಡಿಲ್ಲ ಎಂದು ಅರ್ಚಕರೊಬ್ಬರು ರಂಪಾಟ ನಡೆಸಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಬ್ರಹ್ಮಾವರದ ತಾಲೂಕಿನ ಹೊಸೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೆಲವು ದಿನಗಳ ಹಿಂದೆ ರಾಘವೇಂದ್ರ ಎಂಬವರ ತಾಯಿ ಮೃತಪಟ್ಟಿದ್ದು, ಮಾರ್ಚ್ 6 ರಂದು ರಾಘವೇಂದ್ರ ಅವರ ಮನೆಯಲ್ಲಿ ಮೃತರ ಶ್ರಾದ್ಧ ಕಾರ್ಯ ನಡೆದಿತ್ತು.

ಶ್ರಾದ್ದ ಕಾರ್ಯ ನಡೆದ ಬಳಿಕ ರಾಘವೇಂದ್ರ ಅವರ ಮನೆಗೆ ಅತಿಕ್ರಮವಾಗಿ ಪ್ರವೇಶ ಮಾಡಿದ್ದ ಅರ್ಚಕ ರಾಮಕೃಷ್ಣ
ಪೂಜೆಯನ್ನು ಬೇರೆಯವರಿಗೆ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಘವೇಂದ್ರ ಕುಟುಂಬವನ್ನು ಸರ್ವನಾಶ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಅಲ್ಲದೇ ಅರ್ಚಕ ರಾಮಕೃಷ್ಣ ವಿರುದ್ಧ ಜಾತಿ ನಿಂದನೆ ಮಾಡಿ ಬೆದರಿಕೆ ಒಡ್ಡಿದ ಆರೋಪ ವ್ಯಕ್ತವಾಗಿದ್ದು,
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅರ್ಚಕನ ವಿರುದ್ಧ ಎಫ್ ಐಆರ್ ದಾಖಲಾಗಿದೆ.

- Advertisement -

Latest News

error: Content is protected !!