Monday, June 8, 2026
Homeಕರಾವಳಿಭೂಸೇನೆಯ ಲೆಫ್ಟಿನೆಂಟ್ ಆಗಿ ಸುಬ್ರಹ್ಮಣ್ಯದ ಅಜಿತೇಶ್ ನಿಯುಕ್ತಿ

ಭೂಸೇನೆಯ ಲೆಫ್ಟಿನೆಂಟ್ ಆಗಿ ಸುಬ್ರಹ್ಮಣ್ಯದ ಅಜಿತೇಶ್ ನಿಯುಕ್ತಿ

- Advertisement -
- Advertisement -

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಗ್ರಾಮದ ನೂಚಿಲ ನಿವಾಸಿ ಅಜಿತೇಶ್ ಪಿ.ಎಸ್.ಪೆರ್ಮುಖ ಭೂಸೇನೆಯ ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡಿದ್ದಾರೆ.

ಅಜಿತೇಶ್ ಪರಿಚಯ: ಅಜಿತೇಶ್ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ, ಪದವಿಪೂರ್ವ ಶಿಕ್ಷಣವನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ, ಫಾರೆಸ್ಟರಿಯಲ್ಲಿ ಬಿಎಸ್‌ಸಿ ಪದವಿಯನ್ನು ಮಡಿಕೇರಿ ಪೊನ್ನಂಪೇಟೆ ಕಾಲೇಜಿನಲ್ಲಿ ಪಡೆದು ಬಳಿಕ ಡೆಹ್ರಾಡೂನ್‌ನ ಫಾರೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ದ್ವಿತೀಯ ಎಂಎಸ್ಸಿ ಪದವಿ ವ್ಯಾಸಂಗ ಮಾಡಿದ್ದರು. ಅಜಿತೇಶ್ ಕಳೆದ ವರ್ಷ ನಡೆದ ಭೂಸೇನೆ ನೇಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಒಂದು ವರ್ಷ ಚೆನೈನ ಭಾರತೀಯ ಸೇನಾ ಅಧಿಕಾರಿಗಳ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದರು. ಅಜಿತೇಶ್ ಅವರು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ವಿದ್ಯಾರತ್ನ ಹಾಗೂ ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಶ್ರೀಕೃಷ್ಣ ಶರ್ಮ ಪಿ.ಅವರ ಪುತ್ರ.

- Advertisement -

Latest News

error: Content is protected !!