Wednesday, June 3, 2026
Homeಚಿಕ್ಕಮಗಳೂರುಚಿಕ್ಕಮಗಳೂರು; ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಯುವಕ ಆತ್ಮಹತ್ಯೆ

ಚಿಕ್ಕಮಗಳೂರು; ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಯುವಕ ಆತ್ಮಹತ್ಯೆ

- Advertisement -
- Advertisement -

ಚಿಕ್ಕಮಗಳೂರು; ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಯಡದಾಳು ಗ್ರಾಮದಲ್ಲಿ ನಡೆದಿದೆ.ಕಾರ್ತಿಕ್ (23) ಆತ್ಮಹತ್ಯೆ ಮಾಡಿಕೊಂಡ ಯುವಕ.

ಭಾರತೀಯ ಸೇನೆಯ ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆ.ಇದನ್ನು ಮನೆಯವರಿಗೆ ಹೇಳುವ ಧೈರ್ಯ ನನ್ನ ಬಳಿ ಇಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಕಾರ್ತಿಕ್ ನೇಣಿಗೆ ಶರಣಾಗಿದ್ದಾರೆ.ಸೇನೆಗೆ ಸೇರಬೇಕೆಂದು 2 ವರ್ಷದಿಂದ ಕಾರ್ತಿಕ್ ನಿರಂತರ ಪ್ರಯತ್ನಿಸುತ್ತಿದ್ದರು.ಮೊನ್ನೆ ಸೇನಾ ನೇಮಕಾತಿ ಪರೀಕ್ಷೆಯ ರಿಸಲ್ಟ್ ಬಂದಾಗ ಫೇಲ್ ಆಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!