Friday, May 3, 2024
Homeಮನರಂಜನೆಕೊನೆಗೂ ಸಿಹಿ ಸುದ್ದಿ ಕೊಟ್ಟ ದೀಪಿಕಾ-ರಣವೀರ್ ಸಿಂಗ್; ತಾಯಿಯಾಗ್ತಿದ್ದಾರೆ ದೀಪಿಕಾ ಪಡುಕೋಣೆ

ಕೊನೆಗೂ ಸಿಹಿ ಸುದ್ದಿ ಕೊಟ್ಟ ದೀಪಿಕಾ-ರಣವೀರ್ ಸಿಂಗ್; ತಾಯಿಯಾಗ್ತಿದ್ದಾರೆ ದೀಪಿಕಾ ಪಡುಕೋಣೆ

spot_img
- Advertisement -
- Advertisement -

ಮುಂಬೈ: ಬಾಲಿವುಡ್ ನ ಸೂಪರ್ ಜೋಡಿ ದೀಪಿಕಾ-ರಣವೀರ್ ಸಿಂಗ್ ಕೊನೆಗೂ ಅಭಿಮಾನಿಗಳಿಗೆ ಸಿಹಿ ಸುದ್ದಿಕೊಟ್ಟಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್​ ಸಿಂಗ್​ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.


ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ದಂಪತಿ ಈ ವರ್ಷ ಸೆಪ್ಟೆಂಬರ್​ನಲ್ಲಿ ಮಗುವಿಗೆ ದೀಪಿಕಾ ಜನ್ಮ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಚಿತ್ರದಲ್ಲಿ ಯಾವುದೇ ಕ್ಯಾಪ್ಷನ್​ ಇಲ್ಲ. ಮಗುವಿಗೆ ಸಂಬಂಧಿಸಿದ ಬಟ್ಟೆ, ಶೂ, ಆಟಿಕೆ, ಟೋಪಿ ಮುಂತಾದ ವಸ್ತುಗಳಿರುವ ಚಿತ್ರವನ್ನು ಅವರು ಪೋಸ್ಟ್​ ಮಾಡಿದ್ದಾರೆ. ‘ಸೆಪ್ಟೆಂಬರ್​ 2024 ’ ಎಂದು ಇದರಲ್ಲಿ ಬರೆಯಲಾಗಿದೆ. ಈ ದಂಪತಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್ ಅವರು ಪರಸ್ಪರ ಪ್ರೀತಿಸಿ 2018ರಲ್ಲಿ ವಿವಾಹವಾಗಿದ್ದರು. ಕಳೆದ ಕೆಲವು ದಿನಗಳಿಂದ  ದೀಪಿಕಾ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.. ಇದೀಗ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ ರಣ್ವೀರ್ ಹಾಗೂ ದೀಪಿಕಾ.

- Advertisement -
spot_img

Latest News

error: Content is protected !!