Saturday, June 13, 2026
Homeತಾಜಾ ಸುದ್ದಿಮುರುಘಾಮಠದ ಅಧಿಕಾರವನ್ನು ಮತ್ತೆ ಮರಳಿ ಪಡೆದ ಮುರುಘಾ ಶ್ರೀ

ಮುರುಘಾಮಠದ ಅಧಿಕಾರವನ್ನು ಮತ್ತೆ ಮರಳಿ ಪಡೆದ ಮುರುಘಾ ಶ್ರೀ

- Advertisement -
- Advertisement -

2022ರ ಸೆ.1ರಂದು ಪೋಕ್ಸ್‌ ಕೇಸ್‌ನಲ್ಲಿ ಮುರುಘಾ ಶ್ರೀ ಬಂಧನವಾಗಿದ್ದು, ಈ ಹಿನ್ನಲೆ ಮುರುಘಾ ಮಠಕ್ಕೆ ಆಡಳಿತಾಧಿಕಾರಿಯನ್ನು ರಾಜ್ಯ ಸರ್ಕಾರವೇ ನೇಮಿಸಿತ್ತು.

ಇದೀಗ ಡಾ.ಶಿವಮೂರ್ತಿ ಮುರುಘಾ ಶರಣರ ಕೈಗೆ ಮುರುಘಾಮಠದ ಅಧಿಕಾರ ದೊರೆತಿದೆ. 

ರಾಜ್ಯ ಸರ್ಕಾರ ನೇಮಕ ಮಾಡಿದ್ದಂತಹ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹಿನ್ನೆಲೆ ಹೈಕೋರ್ಟ್‌ ಆಡಳಿತಾಧಿಕಾರಿ ನೇಮಕಾತಿ ರದ್ದು ಪಡಿಸಿತ್ತು. ಮುರುಘಾಶ್ರೀ ಜೈಲಿನಲ್ಲಿದ್ದ ಕಾರಣ ಪಿಡಿಜೆಗೆ ತಾತ್ಕಾಲಿಕ ಅಧಿಕಾರವು ನೀಡಿತ್ತು.

ಅದರಂತೆ ಚಿತ್ರದುರ್ಗ ಪಿಡಿಜೆ, ಮಠದ ಆಡಳಿತಾಧಿಕಾರಿ ಆಗಿದ್ದರು. ನವೆಂಬರ್ 16ರಂದು ಜಾಮೀನಿನ ಮೇಲೆ ಮುರುಘಾಶ್ರೀ ಬಿಡುಗಡೆಯಾದ ಹಿನ್ನಲೆ ಮಠದ ಅಧಿಕಾರ ಹಿಂದಿರುಗಿಸುವಂತೆ ಮುರುಘಾಶ್ರೀ ಕೋರ್ಟ್ ಮೊರೆ ಹೋಗಿದ್ದರು. ಅದರಂತೆ ಚಿತ್ರದುರ್ಗ ಪಿಡಿಜೆಯಿಂದ ಮುರುಘಾಶ್ರೀಗೆ ಅಧಿಕಾರ ಹಸ್ತಾಂತರಿಸಿ ಹೈಕೋರ್ಟ್ ಆದೇಶಿಸಿದ ಬೆನ್ನಲ್ಲೇ ಲಕೋಟೆ ಮೂಲಕ ಮುರುಘಾಶ್ರೀಗೆ ಅಧಿಕಾರ ಹಸ್ತಾಂತರ ಪತ್ರ ರವಾನಿಸಲಾಗಿದೆ.

ಇನ್ನು ಮುರುಘಾಶ್ರೀಗೆ ಹೈಕೋರ್ಟ್ ಚಿತ್ರದುರ್ಗ ಜಿಲ್ಲೆ ಪ್ರವೇಶಿಸದಂತೆ ಷರತ್ತು ನೀಡಿದ ಹಿನ್ನಲೆಯಲ್ಲಿ, ಶ್ರೀಗಳು ಜಿಲ್ಲೆಯಿಂದ ಹೊರಗಿದ್ದುಕೊಂಡೇ ಮಠದ ಆಡಳಿತವನ್ನು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!