Monday, June 8, 2026
Homeಕರಾವಳಿಉಡುಪಿಬಿಜೆಪಿ ಜೊತೆಗಿನ ಮೈತ್ರಿಯ ಜೆಡಿಎಸ್ ನಿಲುವು ಸ್ವಾಗತಿಸಿದ ಉಡುಪಿ ಶಾಸಕ ಯಶಪಾಲ್ ಸುವರ್ಣ

ಬಿಜೆಪಿ ಜೊತೆಗಿನ ಮೈತ್ರಿಯ ಜೆಡಿಎಸ್ ನಿಲುವು ಸ್ವಾಗತಿಸಿದ ಉಡುಪಿ ಶಾಸಕ ಯಶಪಾಲ್ ಸುವರ್ಣ

- Advertisement -
- Advertisement -

ಉಡುಪಿ: ಬಿಜೆಪಿ ಜೊತೆಗಿನ ಮೈತ್ರಿಯ ಜೆಡಿಎಸ್ ನಡೆಯನ್ನು ಸ್ವಾಗತಿಸುವುದಾಗಿ ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ.

ಉಡುಪಿಯಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಶಾಸಕ ಸುವರ್ಣ, ಎನ್ ಡಿಎಗೆ ಜೆಡಿಎಸ್ ಬೆಂಬಲ ಸೂಚಿಸಿದ್ದು,ದೇಶದ ಭವಿಷ್ಯಕ್ಕೆ ನರೇಂದ್ರ ಮೋದಿ ಅನಿವಾರ್ಯ ಎಂದು ದೇವೇಗೌಡರು ಮನಗಂಡಿದ್ದಾರೆ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿಗಳ ನಡೆಯನ್ನು ಸ್ವಾಗತಿಸುವುದಾಗಿ ಹೇಳಿರುವ ಯಶಪಾಲ್ ಸುವರ್ಣ, ಪ್ರಧಾನಿ ಮೋದಿಗೆ ಶಕ್ತಿ ತುಂಬಲು ಜೆಡಿಎಸ್ ಬೆಂಬಲಿಸಿದೆ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಇಂದಷ್ಟೇ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಖಚಿತಪಡಿಸಿದ್ದರು.

- Advertisement -

Latest News

error: Content is protected !!