Sunday, October 18, 2026
Homeತಾಜಾ ಸುದ್ದಿಹುಚ್ಚ ವೆಂಕಟ್ ಸ್ಥಿತಿ ಕಂಡು ಮರುಗಿ‌ ನೆರವಿಗೆ ಮುಂದಾದ ಕಿಚ್ಚ ಸುದೀಪ್.!

ಹುಚ್ಚ ವೆಂಕಟ್ ಸ್ಥಿತಿ ಕಂಡು ಮರುಗಿ‌ ನೆರವಿಗೆ ಮುಂದಾದ ಕಿಚ್ಚ ಸುದೀಪ್.!

- Advertisement -
- Advertisement -

ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ಕುಗ್ಗಿಹೋಗಿ ರಸ್ತೆ ರಸ್ತೆಗಳಲ್ಲಿ ತಮ್ಮದೇ ಆದ ಲೋಕದಲ್ಲಿ ತಮಗಿಷ್ಟ ಬಂದಂತೆ ಆಡುತ್ತಿರುವ ಹುಚ್ಚ ವೆಂಕಟ್, ಅನೇಕರಿಂದ ಬೈಸಿಕೊಂಡಿದ್ದಲ್ಲದೆ ಹೊಡೆಸಿಕೊಂಡಿದ್ದೂ ಇದೆ.

ನಾಗಮಂಗಲದಲ್ಲೂ ವೆಂಕಟ್ ನಡೆಸಿದ ಹುಚ್ಚಾಟದ ವರ್ತನೆಯ ವಿಡಿಯೋ ವೈರಲ್ ಆಗಿತ್ತು. ಅಷ್ಟೆ ಅಲ್ಲ ಇತ್ತೀಚೆಗೂ ಕೂಡ ಶ್ರೀರಂಗಪಟ್ಟಣದಲ್ಲಿ ಹಲ್ಲೆ ಮಾಡಲಾಗಿತ್ತು. ಉಮ್ಮಡಹಳ್ಳಿ ಗೇಟ್ ಬಳಿ ಹುಚ್ಚ ವೆಂಕಟ್ ಮೇಲೆ ನಡೆದಿದ್ದ ಹಲ್ಲೆ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಅನೇಕರು ಮರುಗಿದ್ದರು.

ಮಾನಸಿಕವಾಗಿ ಜರ್ಜರಿತರಾಗಿರುವ ಹುಚ್ಚ ವೆಂಕಟ್ ಸ್ಥಿತಿ ಕಂಡು ಇದೀಗ ನಟ ಸುದೀಪ್, ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಕಿಚ್ಚ ಸುದೀಪ್ ಅಭಿಮಾನಿಗಳು ಹಲ್ಲೆಗೊಳಗಾದ ವೆಂಕಟ್ ನೆರವಿಗೆ ನಿಂತಿದ್ದು, ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯಿಂದ ಸಹಾಯ ಮಾಡುತ್ತಿದ್ದಾರೆ.

ಹುಚ್ಚ ವೆಂಕಟ್ ಅವರು ಎಲ್ಲೇ ಕಂಡು ಬಂದರೂ 6360334455 ಗೆ ಕರೆ ಮಾಡಿ ತಿಳಿಸಿ ಎಂದಿದ್ದಾರೆ. ಅಲ್ಲದೆ ಹುಚ್ಚ ವೆಂಕಟ್ ಮೇಲೆ ಸಾರ್ವಜನಿಕರು ಸ್ವಲ್ಪ ಸಂಯಮ ಮತ್ತು ಕರುಣೆ ತೋರಬೇಕೆಂದು ಕಿಚ್ಚನ ಅಭಿಮಾನಿಗಳು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!