Thursday, June 4, 2026
Homeತಾಜಾ ಸುದ್ದಿಪಿಯು ಪರೀಕ್ಷೆ ಬರೆದ ವಿದ್ಯಾರ್ಥಿನಿಯೋರ್ವಳಿಗೆ ಕರೋನ ಪಾಸಿಟಿವ್......!!

ಪಿಯು ಪರೀಕ್ಷೆ ಬರೆದ ವಿದ್ಯಾರ್ಥಿನಿಯೋರ್ವಳಿಗೆ ಕರೋನ ಪಾಸಿಟಿವ್……!!

- Advertisement -
- Advertisement -

ಬೆಂಗಳೂರು, ಜೂ. 19 : ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಯು ಜೂನ್ 18 ರಂದು ನಡೆದಿದ್ದು, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಗೆ ಕರೋನ ಪಾಸಿಟಿವ್ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅವಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪರೀಕ್ಷೆ ಬರೆದ ವಿದ್ಯಾರ್ಥಿನಿಯ ಕೈಗೆ ಸೀಲ್ ಹಾಕಿದ್ದು ಹೋಂ ಕ್ವಾರಂಟೈನ್ ನಲ್ಲಿದ್ದಳು ಎನ್ನಲಾಗಿದೆ. ಆದರೆ ಕೈಯಲ್ಲಿದ್ದ ಸೀಲ್ ಅಳಿಸಿಹಾಕಿ ಪರೀಕ್ಷೆ ಬರೆದಿದ್ದ, ಈಕೆಯ ರಿಪೋರ್ಟ್ ಪಾಸಿಟಿವ್ ಎಂದು ತಿಳಿಸಲಾಗಿದೆ. ಇದರಿಂದ ಪರೀಕ್ಷೆ ಕೇಂದ್ರದಲ್ಲಿದ್ದ ಇತರ ವಿದ್ಯಾರ್ಥಿನಿಯರು, ಶಿಕ್ಷಕರು, ಪರೀಕ್ಷೆ ಮೇಲ್ವಿಚಾರಕರು, ಹಾಗೂ ಅವರ ಮನೆಮಂದಿಯ್ಲಲೂ ಆತಂಕ ಉಂಟು ಮಾಡಿಸಿದೆ. ಇದೀಗ ವಿದ್ಯಾರ್ಥಿನಿಯೊಂದಿಗೆ ಸಂಪರ್ಕದಲ್ಲಿದ್ದವರ ಮಾಹಿತಿಯನ್ನು ಕೂಡ ಕಲೆಹಾಕಲಾಗುತ್ತಿದೆ.

- Advertisement -

Latest News

error: Content is protected !!