Saturday, June 6, 2026
Homeಕರಾವಳಿಉಡುಪಿಉಡುಪಿ: ಮಗು ಸಾವನ್ನಪ್ಪಿದ ನೋವಿನಿಂದ ಹೊರ ಬರಲಾರದೆ ತಂದೆ ಆತ್ಮಹತ್ಯೆ

ಉಡುಪಿ: ಮಗು ಸಾವನ್ನಪ್ಪಿದ ನೋವಿನಿಂದ ಹೊರ ಬರಲಾರದೆ ತಂದೆ ಆತ್ಮಹತ್ಯೆ

- Advertisement -
- Advertisement -

ಉಡುಪಿ:ಮಗು ಸಾವನ್ನಪ್ಪಿದ ನೋವಿನಿಂದ ಹೊರ ಬರಲಾರದೇ ವ್ಯಕ್ತಿಯೋರ್ವರು‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಹೆಸ್ಕತ್ತೂರು ಗ್ರಾಮದಲ್ಲಿ ನಡೆದಿದೆ.

ಹೆಸ್ಕತ್ತೂರು ಗ್ರಾಮದ ನಿವಾಸಿ  ರವೀಂದ್ರ ಕುಲಾಲ್ (33) ಮೃತ ದುರ್ದೈವಿ. ಇವರ ಒಂದೂವರೆ ವರ್ಷದ ಮಗು ಅನಾರೋಗ್ಯದಿಂದ ಮೃತಪಟ್ಟಿತ್ತು.ಅದಾದ ಬಳಿಕ ರವೀಂದ್ರ ಅವರು ವಿಪರೀತ ಮದ್ಯ ಸೇವನೆ ಮಾಡುತ್ತಿದ್ದರು.  ಇದೇ ವಿಚಾರಕ್ಕೆ ಗಲಾಟೆಯಾಗಿ ಮೊನ್ನೆ ಮಧ್ಯಾಹ್ನ ಮನೆಯವರೆಲ್ಲರನ್ನು ಮನೆಯಿಂದ ಹೊರಗಡೆ ಕಳುಹಿಸಿದ್ದರು. ಬಳಿಕ ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!