Tuesday, May 7, 2024
Homeತಾಜಾ ಸುದ್ದಿಮದ್ಯ ಖರೀದಿ ಹಾಗೂ ಸೇವನೆಯ ವಯಸ್ಸಿನ ಮಿತಿಯನ್ನು ಇಳಿಸಲು ಸರ್ಕಾರ ಚಿಂತನೆ

ಮದ್ಯ ಖರೀದಿ ಹಾಗೂ ಸೇವನೆಯ ವಯಸ್ಸಿನ ಮಿತಿಯನ್ನು ಇಳಿಸಲು ಸರ್ಕಾರ ಚಿಂತನೆ

spot_img
- Advertisement -
- Advertisement -

ಬೆಂಗಳೂರು:  ಮದ್ಯ ಖರೀದಿ ಮತ್ತು ಸೇವನೆಯ ವಯಸ್ಸಿನ ಮಿತಿಯನ್ನು ಇಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.ಕರ್ನಾಟಕ ಅಬಕಾರಿ ಕಾಯ್ದೆ 1965ರ ಪ್ರಕಾರ ಮದ್ಯ ಖರೀದಿಸುವ ವಯಸ್ಸು 21 ವರ್ಷ ಇದೆ. ಈಗ ಈ ಮಿತಿಯನ್ನು 18 ವರ್ಷಕ್ಕೆ ಇಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಕುರಿತು ಅಬಕಾರಿ ಇಲಾಖೆ ಜನವರಿ 9 ರಂದು ಕರಡು ಪ್ರಕಟಿಸಿದ್ದು, 30 ದಿನಗಳಲ್ಲಿ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿವೃತ್ತ ಅಧಿಕಾರಿ ವಿ ಯಶವಂತ್ ಅವರ ನೇತೃತ್ವದಲ್ಲಿ ರಚಿಸಲಾದ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ಪ್ರಸ್ತಾವನೆಯನ್ನು ರಚಿಸಲಾಗಿದೆ. ಕರ್ನಾಟಕ ಅಬಕಾರಿ ಕಾಯ್ದೆ-1965 ರ ನಿಬಂಧನೆಗಳ ಪ್ರಕಾರ, ಮದ್ಯದ ಖರೀದಿ ಮತ್ತು ಸೇವನೆಗೆ ಕನಿಷ್ಠ 18 ವರ್ಷ. ಆದರೆ ಕರ್ನಾಟಕ ಅಬಕಾರಿ ಪರವಾನಗಿ (ಸಾಮಾನ್ಯ ಷರತ್ತುಗಳು) ನಿಯಮಗಳು 1967 ರ ಪ್ರಕಾರ, ಕನಿಷ್ಠ ಕಾನೂನು ವಯಸ್ಸು 21 ಆಗಿದೆ. ಹೀಗಾಗಿ ಈ ಗೊಂದಲಗಳಿಗೆ ತೆರೆ ಎಳೆಯಲು ಕರ್ನಾಟಕ ಸರ್ಕಾರ ಮದ್ಯ ಸೇವನೆ ಮತ್ತು ಖರೀದಿ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಇಳಿಸಲು ಮುಂದಾಗಿದೆ.

ವಯೋಮಿತಿಯನ್ನು ಕಡಿಮೆಗೊಳಿಸುವಂತೆ ಮದ್ಯ ವ್ಯಾಪಾರಸ್ಥರು ಒತ್ತಾಯಿಸುತ್ತಿದ್ದು, ಇದರಿಂದ ಸರ್ಕಾರಕ್ಕೆ ಆದಾಯ ಹೆಚ್ಚುತ್ತದೆ. ಮದ್ಯ ಮಾರಾಟದಿಂದ 2019-20ರಲ್ಲಿ 21,583 ಕೋಟಿ ರೂ., 2021-22ರಲ್ಲಿ ಮದ್ಯ ಮಾರಾಟದಿಂದ ರಾಜ್ಯಕ್ಕೆ 26,377 ಕೋಟಿ ರೂ. ಆದಾಯವಾಗಿದೆ. ಗೋವಾ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಪುದುಚೇರಿಯಂತಹ ಕೆಲವು ರಾಜ್ಯಗಳು ವಯಸ್ಸಿನ ಮಿತಿಯನ್ನು 18 ವರ್ಷಕ್ಕೆ ಇಳಿಸಿವೆ.

- Advertisement -
spot_img

Latest News

error: Content is protected !!