Monday, June 8, 2026
Homeಕರಾವಳಿಉಡುಪಿಉಡುಪಿ: ಗಂಭೀರ ಸ್ಥಿತಿಯಲ್ಲಿರುವ ಯುವಕನ ಗುರುತು ಪತ್ತೆಗೆ ಮನವಿ

ಉಡುಪಿ: ಗಂಭೀರ ಸ್ಥಿತಿಯಲ್ಲಿರುವ ಯುವಕನ ಗುರುತು ಪತ್ತೆಗೆ ಮನವಿ

- Advertisement -
- Advertisement -

ಉಡುಪಿ: ಇಲ್ಲಿನ ಮೂಕಾಂಬಿಕಾ ಭಜನಾ ಮಂದಿರ ಸಮೀಪದ ತೋಡಿನಲ್ಲಿ ಬಿದ್ದಿದ್ದ ಅಪರಿಚಿತ ಯುವಕನನ್ನು ನಗರ ಪೊಲೀಸ್ ಠಾಣೆಯ ಪೊಲೀಸರು ರಕ್ಷಿಸಿ, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಹಕಾರದೊಂದಿಗೆ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಯುವಕನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಯುವಕನ ಬಳಿ ಗುರುತಿನ ಚೀಟಿ ಪತ್ತೆಯಾಗಿದ್ದು, ಅದರಲ್ಲಿ ವಿನೀಶ್ ಎಂ.ವಿ., ವಾಲಿಯಾ ವಿಥಿಲ್, ಕರಿಂಬಾಮ, ಪಣಿಯೂರ್, ಕಣ್ಣೂರು ವಿಳಾಸದ ಉಲ್ಲೇಖ ಇದೆ. ಸಂಬಂಧಿಕರು ತುರ್ತಾಗಿ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

- Advertisement -

Latest News

error: Content is protected !!