- Advertisement -
![]()
- Advertisement -
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಇವತ್ತು ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಏಳನೇ ಬಾರಿಗೆ ಭೇಟಿಯಾದರು.
ಮೈದುನ ದಿನಕರ್ ತೂಗುದೀಪ ಅವರೊಂದಿಗೆ ಜೈಲಿಗೆ ಆಗಮಿಸಿದ ವಿಜಯಲಕ್ಷ್ಮೀ ದರ್ಶನ್ ಬನಶಂಕರಿ ದೇವಿಯ ಪ್ರಸಾದವನ್ನು ನೀಡಿದರು.
ನಿನ್ನೆ ಭೀಮನ ಅಮಾವಾಸ್ಯೆ ಹಿನ್ನೆಲೆ ವಿಜಯಲಕ್ಷ್ಮೀ ಅವರು, ಸ್ನೇಹಿತರೊಂದಿಗೆ ಬನಶಂಕರಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಇಂದು ನಟ ದರ್ಶನ್ ಅವರಿಗೆ ಬನಶಂಕರಿ ತಾಯಿಗೆ ಪೂಜೆ ಮಾಡಿಸಿದಂತ ಪ್ರಸಾದ, ಹೂ ನೀಡಿ ದರ್ಶನ್ ಅವರ ಜೊತೆ ಕೆಲ ಹೊತ್ತು ಮಾತುಕತೆ ನಡೆಸಿ ತೆರಳಿದ್ದಾರೆ ಎನ್ನಲಾಗಿದೆ.
- Advertisement -


