Thursday, June 4, 2026
Homeತಾಜಾ ಸುದ್ದಿಬಾವಿಗೆ ಹಾರಿ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ

ಬಾವಿಗೆ ಹಾರಿ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ

- Advertisement -
- Advertisement -

ಯಾದಗಿರಿ: ಬಾವಿಗೆ ಹಾರಿ ಒಂದೇ ಕುಟುಂಬದ 6 ಜನರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ನಡೆದಿದೆ. ದೋರನಹಳ್ಳಿಯಲ್ಲಿ ದಂಪತಿ ಮತ್ತು ನಾಲ್ವರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೋರನಹಳ್ಳಿ ದಂಪತಿಯರಾದ ಭೀಮರಾಯ ಸುರಪುರ(45) ಮತ್ತು ಶಾಂತಮ್ಮ(36) ಹಾಗೂ ಮಕ್ಕಳಾದ ಸುಮಿತ್ರಾ(12), ಶ್ರೀದೇವಿ(12), ಲಕ್ಷ್ಮೀ(8), ಶಿವರಾಜ(9) ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾಲಬಾಧೆಯಿಂದ ಇಡೀ ಕುಟುಂಬದ ಸದಸ್ಯರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸರಿಂದ ಶವಗಳಿಗಾಗಿ ಶೋಧ ಕಾರ್ಯ ನಡೆದಿದೆ. ಶಹಾಪುರ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

- Advertisement -

Latest News

error: Content is protected !!