Wednesday, April 24, 2024
Homeಕ್ರೀಡೆ4ನೇ ಟಿ20: ಭಾರತಕ್ಕೆ 8 ರನ್ ರೋಚಕ ಜಯ, ಸರಣಿ ಸಮಬಲ

4ನೇ ಟಿ20: ಭಾರತಕ್ಕೆ 8 ರನ್ ರೋಚಕ ಜಯ, ಸರಣಿ ಸಮಬಲ

spot_img
- Advertisement -
- Advertisement -

ಅಹಮದಾಬಾದ್: ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್ ಹಾಗೂ ರಾಹುಲ್ ಚಹಾರ್ ಅವರ ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಭಾರತ ತಂಡ 8 ರನ್ ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿ 5 ಪಂದ್ಯಗಳ ಟಿ-20 ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿದೆ. ಈ ಮೂಲಕ ಅಂತಿಮ ಪಂದ್ಯದಲ್ಲಿ ವಿಜೇತರಿಗೆ ಸರಣಿ ಒಲಿಯಲಿದೆ.

4ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ ಗಳಲ್ಲಿ 8 ವಿಕೆಟ್ ಗೆ 185 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇಂಗ್ಲೆಂಡ್ ಪರ ಆರಂಭಿಕ ಜೇಸನ್ ರಾಯ್ (40 ರನ್ 27 ಎಸೆತ, 6 ಬೌಂಡರಿ, 1 ಸಿಕ್ಸರ್) ಮತ್ತು ಬೆನ್ ಸ್ಟೋಕ್ಸ್ (46 ರನ್, 23 ಎಸೆತ, 4 ಬೌಂಡರಿ, 3 ಸಿಕ್ಸರ್) ಹೋರಾಟ ನಡೆಸಿದರು.

ಭಾರತದ ಬೌಲಿಂಗ್ ನಲ್ಲಿ ಶಾರ್ದೂಲ್ ಠಾಕೂರ್ (3-42)ದುಬಾರಿಯಾದರೂ ಯಶಸ್ವಿ ಬೌಲರ್ ಎನಿಸಿಕೊಂಡರು. ಹಾರ್ದಿಕ್ ಪಾಂಡ್ಯ(2-16)ಹಾಗೂ ರಾಹುಲ್ ಚಹಾರ್ (2-35) ತಲಾ ಎರಡು ವಿಕೆಟ್ ಗಳನ್ನು ಪಡೆದಿದ್ದಾರೆ.

ಇನ್ನು ಭಾರತದ ಪರ ಬ್ಯಾಟಿಂಗ್ ನಲ್ಲಿ ಆರಂಭಿಗರಾದ ರೋಹಿತ್ ಶರ್ಮಾ(12) ಹಾಗೂ ರಾಹುಲ್ (14)ಉತ್ತಮ ಆರಂಭ ಒದಗಿಸಲು ವಿಫಲರಾದರು. ನಾಯಕ ವಿರಾಟ್ ಕೊಹ್ಲಿ 5 ಎಸೆತ ಎದುರಿಸಿದರೂ ಕೇವಲ 1 ರನ್ ಗಳಿಸಿ ರಶೀದ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಯುವ ಬ್ಯಾಟ್ಸಮನ್ ಸೂರ್ಯಕುಮಾರ್ ಮಿಂಚಿನ ಅರ್ಧಶತಕ ಸಿಡಿಸಿ ತಂಡವನ್ನು ಆಧರಿಸಿದರು. ಸೂರ್ಯಕುಮಾರ್ ಯಾದವ್ 31 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸೇರಿದ 57 ರನ್ ಗಳಿಸಿದ್ದಾಗ ವಿವಾದಾತ್ಮಕ ಕ್ಯಾಚ್ ಗೆ ಬಲಿಯಾದರು. ಇನಿಂಗ್ಸ್ ಆರಂಭಿಸಿದ ಕೆಳ ಕ್ರಮಾಂಕದಲ್ಲಿ ರಿಷಭ್ ಪಂತ್ 23 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 30 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 18 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 37 ರನ್ ಸಿಡಿಸಿದರು.

- Advertisement -
spot_img

Latest News

error: Content is protected !!