Thursday, June 25, 2026
Homeಮಹಾನ್ಯೂಸ್ಭಾರತ್ ಬ್ಯಾಂಕಿನ  ಗೋರೆಗಾಂವ್ ಪಶ್ಚಿಮ ಶಾಖೆಯಲ್ಲಿ 47ನೇ ಸಂಸ್ಥಾಪನ ದಿನಾಚರಣೆ; ಭಾರತ್ ಬ್ಯಾಂಕಿನ  ಸಹಕಾರ ಜೀವನದಲ್ಲಿ...

ಭಾರತ್ ಬ್ಯಾಂಕಿನ  ಗೋರೆಗಾಂವ್ ಪಶ್ಚಿಮ ಶಾಖೆಯಲ್ಲಿ 47ನೇ ಸಂಸ್ಥಾಪನ ದಿನಾಚರಣೆ; ಭಾರತ್ ಬ್ಯಾಂಕಿನ  ಸಹಕಾರ ಜೀವನದಲ್ಲಿ ಮರೆಯಲಾರದಂತಿದೆ – ಗುರುಬಿಂದರ್ ರೆಶಿ ಸಿಂಗ್

- Advertisement -
- Advertisement -

ಮುಂಬಯಿ : ಭಾರತ್ ಬ್ಯಾಂಕಿನ  47ನೇ ಸಂಸ್ಥಾಪನೆ ದಿನಾಚರಣೆಯ ಸಂದರ್ಭದಲ್ಲಿ ಬ್ಯಾಂಕಿನ  ಗೋರೆಗಾಂವ್ ಪಶ್ಚಿಮ ಶಾಖೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಲಾಯಿತು.

ಕಳೆದ ಸುಮಾರು 30 ವರ್ಷಗಳಿಂದ ಭಾರತ್ ಬ್ಯಾಂಕಿನ ಸಣ್ಣ ಪ್ರಮಾಣದ ಸಹಕಾರದಿಂದ ತನ್ನ ಉದ್ಯಮವನ್ನು ಬೆಳೆಸುತ್ತಾ ಇದೀಗ ನಮ್ಮ ಪರಿವಾರದ ಗೋರೆಗಾಂವ್ ಪಶ್ಚಿಮದ ಗುರುದ್ವಾರದ ಹೆಚ್ಚಿನ ಜನರ ಮುಖ್ಯ ಬ್ಯಾಂಕ್ ಭಾರತ್ ಬ್ಯಾಂಕ್ ಆಗಿದೆ. ಗೋರೆಗಾಂವ್ ಪೂರ್ವದಿಂದ ಮಾನ್ಯ ಜಯ ಸಿ. ಸುವರ್ಣರ ಆತ್ಮೀಯವಾದ ನಡವಳಿಕೆ, ಸಮಯಕ್ಕೆ ಸರಿಯಾದ ಸ್ಪಂದನೆ ಯಿಂದಾಗಿ ನಮ್ಮ ಪರಿವಾರ ಭಾರತ್ ಬ್ಯಾಂಕ್ ನ್ನು ಎಂದು ಮರೆಯಲು ಅಸಾಧ್ಯ. ಇಲ್ಲಿನ ಸಿಬ್ಬಂದಿ ವರ್ಗದವರ ಸ್ನೇಹ ನಮ್ಮೆಲ್ಲರನ್ನು ಬ್ಯಾಂಕಿನತ್ತ ಆಕರ್ಷಿಸುತ್ತದೆ.  ಬ್ಯಾಂಕಿಗೆ ಉತ್ತಮ ಭವಿಷ್ಯವನ್ನು ಕೋರುತ್ತೇನೆ ಎಂದು ಹಿರಿಯ ಗ್ರಾಹಕರಾದ  ಗುರು ಬಿಂದರ್ ರಿಷಿ ಸಿಂಗ್ ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯ ನಿತ್ಯಾನಂದ ಕೋಟ್ಯಾನ್ ರವರು ಬ್ಯಾಂಕಿನ ಕಾರ್ಯ ವೈಖರಿಯ ಬಗ್ಗೆ ತಿಳಿಸಿ ಉಪಸ್ಥಿತ ಸರ್ವ ಗ್ರಾಹಕರಿಗೆ ವಂದಿಸಿ ಸದಾ ಬ್ಯಾಂಕ್ ನೊಂದಿಗೆ ವ್ಯವಹರಿಸುವಂತೆ ವಿನಂತಿಸಿದರು. ಶಾಖಾ ಪ್ರಮುಖರಾದ ಪ್ರಿಯಾ ಡಿ ಪೂಜಾರಿ ಸ್ವಾಗತಿಸಿದರು.  ಉಪ ಶಾಖಾ ಪ್ರಮುಖರಾದ ಸುಮಿತ್ರ ಸಫಲಿಗ ವಂದಿಸಿದರು. ಹರ್ಷಿತಾ ಸುವರ್ಣ, ಶ್ರುತಿ ಕೋಟ್ಯಾನ್, ಪ್ರತಿಕ್ಷಾ ಸಿಂಗ್, ಸೂರಜ್ ಸಾಲ್ಯಾನ್, ದಿಶಾ ಛಗ್ ದರ್ಶನ್ ಜೋಶಿ, ಮೋಹನ್ ಅಮಿನ್, ಲಾಲ್ ಜಿ ರಾವರಿಯಾ,  ಜಗನ್ನಾಥ ಕೋಟ್ಯಾನ್,   ವಾಸುದೇವ ಭಟ್,  ರಾಮೇಶ್ ಸುವರ್ಣ,  ಕೇಶವ ಕೋಟ್ಯಾನ್,   ವಿವೇಕ್ ಖಾನ್ವಿಲ್ಕರ್,  ರಾಜೇಶ್ ಶರ್ಮಾ,  ಶ್ರೀಮತಿ ಮಣೀಂದರ್ ಕೌರ್ ಸಹಾನಿ,   ಶ್ರೀಮತಿ ನೀಲಂ ಭಾನುಶಾಲಿ, ಜಸ್ಮೀತ್ ಸಿಂಗ್ ಸಹಾನಿ, ಅನಿಲ್ ಕುಮಾರ್ ಬರೋಟ್, ಗಂಗಾರಾಂ ಚಿತ್ಯಲ, ನಾರಾಯಣ ತಿಂಗಳಾಯ ಮೊದಲಾದವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!