Friday, June 5, 2026
Homeತಾಜಾ ಸುದ್ದಿ2023 ನನ್ನ ಕೊನೆಯ ಚುನಾವಣೆ, ನಂತರ ರಾಜ್ಯಸಭಾ ಸ್ಥಾನ ಕೊಟ್ಟರೂ ಸ್ವೀಕರಿಸಲ್ಲ: ಮೈಸೂರಿನಲ್ಲಿ ವಿಧಾನಸಭೆ ವಿಪಕ್ಷ...

2023 ನನ್ನ ಕೊನೆಯ ಚುನಾವಣೆ, ನಂತರ ರಾಜ್ಯಸಭಾ ಸ್ಥಾನ ಕೊಟ್ಟರೂ ಸ್ವೀಕರಿಸಲ್ಲ: ಮೈಸೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

- Advertisement -
- Advertisement -

ಮೈಸೂರು: 2023ರ ವಿಧಾನಸಭಾ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದು ವಿಧಾನಸಭೆ ವಿಪಕ್ಷ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಭಾಷಣದ ವೇಳೆ ಈ ಮಾತು ಹೇಳಿದ್ದಾರೆ.

ಬಾದಾಮಿ, ಕೊಪ್ಪಳ, ಕೋಲಾರ, ಹುಣಸೂರು ಮತ್ತು ವರುಣ ಸೇರಿ ಎಲ್ಲಾ ಕಡೆಯೂ ಕರೆದಿದ್ದಾರೆ ಎಂದು ಹೇಳಿರುವ ಸಿದ್ದರಾಮಯ್ಯ, ಇದು ನನ್ನ ಕೊನೆಯ ಚುನಾವಣೆ ಇದರ ನಂತರ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಇದರ ನಂತರ ನನಗೆ ಯಾವುದೇ ಹುದ್ದೆ ಕೊಟ್ಟರೂ ನಾನು ಸ್ವೀಕರಿಸುವುದಿಲ್ಲ ಎಂದು ಹೇಳಿರುವ ಸಿದ್ದರಾಮಯ್ಯ, ರಾಜ್ಯಸಭೆ ಸೇರಿ ಯಾವುದೇ ಸದಸ್ಯತ್ವ ಕೊಟ್ಟರೂ ಸ್ವೀಕರಿಸುವುದಿಲ್ಲ ಎಂದಿದ್ದಾರೆ.

- Advertisement -

Latest News

error: Content is protected !!