Thursday, June 4, 2026
Homeಕರಾವಳಿಬೆಳ್ತಂಗಡಿ : ಅಡಿಕೆ ಮರದಿಂದ ಬಿದ್ದು ಗ್ರಾ.ಪಂ‌ ಮಾಜಿ ಅಧ್ಯಕ್ಷ ಗಂಭೀರ: ಅಡಿಕೆ ಮರಕ್ಕೆ ಹತ್ತುವ...

ಬೆಳ್ತಂಗಡಿ : ಅಡಿಕೆ ಮರದಿಂದ ಬಿದ್ದು ಗ್ರಾ.ಪಂ‌ ಮಾಜಿ ಅಧ್ಯಕ್ಷ ಗಂಭೀರ: ಅಡಿಕೆ ಮರಕ್ಕೆ ಹತ್ತುವ ರೋಪ್ ಕ್ಲೈಂಬರ್ ಯಂತ್ರದ ಅವಘಡ

- Advertisement -
- Advertisement -

ಬೆಳ್ತಂಗಡಿ :ಅಡಿಕೆ ಮರಕ್ಕೆ ಮದ್ದು ಬಿಡುವ ವೇಳೆ ಅಡಿಕೆ ಹತ್ತುವ ರೋಪ್ ಕ್ಲೈಂಬರ್ ಯಂತ್ರದ ರೋಪ್ ಕಟ್ ಆಗಿ 50 ಅಡಿ ಎತ್ತರದಿಂದ ಜಾರಿ ಬಿದ್ದು ಗ್ರಾ.ಪಂ ಮಾಜಿ ಅಧ್ಯಕ್ಷ ಗಂಭೀರ ಗಾಯಗೊಂಡಿರುವ ಘಟನೆ ಇಂದು ಸಂಜೆ ಬೆಳ್ತಂಗಡಿಯ ಕಳೆಂಜದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಗುತ್ತಿಮಾರು ನಿವಾಸಿ  ನಿತ್ಯಾನಂದ ರೈ(45) ಮನೆಯ ತೋಟದಲ್ಲಿ ಇಂದು ಮಳೆ ಕಡಿಮೆ ಇದ್ದಿದ್ದರಿಂದ ಅಡಿಕೆ ಮರಕ್ಕೆ ಮದ್ದು ಬೀಡುತ್ತಿದ್ದ ವೇಳೆ ಸಂಜೆ ಮರಕ್ಕೆ ಹತ್ತುವ ರೋಪ್ ಕ್ಲೈಂಬರ್ ಯಂತ್ರದ ರೋಪ್ ಕಟ್ ಆಗಿ ಕೆಳಗೆ ಜಾರಿಬಿದ್ದು ತಲೆಗೆ ಹಾಗೂ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ತಕ್ಷಣ ಮನೆ ಮಂದಿ ಹಾಗೂ ಸ್ಥಳೀಯ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ‌.ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ನಿತ್ಯಾನಂದ ರೈ ಕಾಂಗ್ರೆಸ್ ಪಕ್ಷದಲ್ಲಿದ್ದು ಕಳೆಂಜ ಗ್ರಾ.ಪಂ ಮಾಜಿ  ಅಧ್ಯಕ್ಷರಾಗಿದ್ದರು , ಕಳೆಂಜ ಗ್ರಾಮದಲ್ಲಿ ಉತ್ತಮ ಒಡನಾಟ ಇಟ್ಟಿಕೊಂಡಿದ್ದರು. ಮನೆಯಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

- Advertisement -

Latest News

error: Content is protected !!