Saturday, June 27, 2026
Homeಕರಾವಳಿಡಾ.ವೀರೇಂದ್ರ ಹೆಗ್ಗಡೆಯವರಿಗೆ ನಾರಾಯಣಗುರುಗಳ ಫೋಟೋ ಉಡುಗೊರೆ

ಡಾ.ವೀರೇಂದ್ರ ಹೆಗ್ಗಡೆಯವರಿಗೆ ನಾರಾಯಣಗುರುಗಳ ಫೋಟೋ ಉಡುಗೊರೆ

- Advertisement -
- Advertisement -

ಧರ್ಮಸ್ಥಳ: ರಾಜ್ಯ ಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಶನಿವಾರ ಭೇಟಿ ಮಾಡಲಾಯಿತು. ತುಳುಭಾಷೆ, ತುಳು ಸಂಸ್ಕೃತಿ ಮೇಲೆ ಅಪಾರ ಅಭಿಮಾನ ಹೊಂದಿರುವ ಅವರ ನಾಮನಿರ್ದೇಶನ ತುಳುನಾಡಿಗೆ ಹೆಮ್ಮೆಯ ವಿಚಾರ ಎಂದು ಅಭಿನಂದಿಸಲಾಯಿತು. ತುಳುಭಾಷೆ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಎಲ್ಲ ಪ್ರಯತ್ನ ಅವರಿಂದ ನೆರವೇರಲಿ ಮತ್ತು ಹೆಗ್ಗಡೆಯವರ ಸಾಮಾಜಿಕ ಕಾರ್ಯ ಭಾರತಾದ್ಯಂತ ಪಸರಿಸಲಿ ಎಂದು ಗೌರವಿಸಿ, ಅವರಿಗೆ ನಾರಾಯಣ ಗುರುಗಳ ಫೋಟೋ ಉಡುಗೊರೆಯಾಗಿ ನೀಡಲಾಯಿತು.

ಕುದ್ರೋಳಿ ‌ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಕ್ಷೇತ್ರಾಡಳಿತ ಸಮಿತಿ ಕೋಶಾಧಿಕಾರಿ ಪದ್ಮರಾಜ್ ಆರ್., ಎಸ್‌ಡಿಎಂ ಕಾನೂನು ಕಾಲೇಜು ನಿವೃತ್ತ ಪ್ರಾಂಶುಪಾಲರ ರಾಜೇಂದ್ರ ಶೆಟ್ಟಿ, ಗುರುಬೆಳದಿಂಗಳು ಸಂಸ್ಥೆಯ ಪ್ರವೀಣ್ ಅಂಚನ್ ಅರ್ಕುಳ, ಸುಜಿತ್ ಕುಮಾರ್, ವಿವೇಕ್ ಬಿ. ಕೋಟ್ಯಾನ್, ಸಂಜಿತ್ ಎಸ್.ಜೆ, ಪತ್ರಕರ್ತ ಮನೋಹರ್ ಬಳಂಜ ಮೊದಲಾದವರಿದ್ದರು.

- Advertisement -

Latest News

error: Content is protected !!