Saturday, June 13, 2026
Homeತಾಜಾ ಸುದ್ದಿಬಟ್ಟೆ ಒಗೆಯಲೆಂದು ಕೆರೆಗೆ ಹೋದ ಇಬ್ಬರು ಬಾಲಕಿಯರು ನೀರಿಗೆ ಬಿದ್ದು ಸಾವು

ಬಟ್ಟೆ ಒಗೆಯಲೆಂದು ಕೆರೆಗೆ ಹೋದ ಇಬ್ಬರು ಬಾಲಕಿಯರು ನೀರಿಗೆ ಬಿದ್ದು ಸಾವು

- Advertisement -
- Advertisement -

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಹಚ್ಚೆಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀಧರಗಡ್ಡೆಯ ಹೊಸ ಊರಿನ ಬಳಿಯ ಕೆರೆಗೆ ಬಾಲಕಿಯರು ಸ್ನೇಹಿತರೊಡನೆ ಬಟ್ಟೆ ತೊಳೆಯಲು ಹೋದಾಗ ನೀರಿಗೆ ಬಿದ್ದ ಸೋಪನ್ನು ನೀರಿನಿಂದ ಎತ್ತಿಕೊಳ್ಳಲು ಹೋಗಿ ಬಾಲಕಿಯೋರ್ವಳು ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ ಆಕೆಯನ್ನು ಇನ್ನುಳಿದವರು ರಕ್ಷಿಸಲು ಹೋಗಿ ಎಲ್ಲರೂ ನೀರುಪಾಲಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.


ವಿದ್ಯಾರ್ಥಿಗಳಾದ ಮಹೇಶ್ವರಿ, ಶ್ರೀದೇವಿ ಮೃತಪಟ್ಟಿದ್ದಾರೆ.ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಪಾಲಕರು ಪೋಷಕರು ಆಗಮನಿಸಿದ್ದಾರೆ. ಸ್ಥಳಕ್ಕೆ ಹಚೋಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

- Advertisement -

Latest News

error: Content is protected !!