Sunday, April 28, 2024
Homeತಾಜಾ ಸುದ್ದಿಹೀಗೊಂದು ಅಪರೂಪದ ಆಪರೇಷನ್ : ಹುಡುಗಿಯ ಹೊಟ್ಟೆಯಲ್ಲಿದ್ದ 2 ಕೆಜಿ ಕೂದಲನ್ನು ಹೊರ ತೆಗೆದ...

ಹೀಗೊಂದು ಅಪರೂಪದ ಆಪರೇಷನ್ : ಹುಡುಗಿಯ ಹೊಟ್ಟೆಯಲ್ಲಿದ್ದ 2 ಕೆಜಿ ಕೂದಲನ್ನು ಹೊರ ತೆಗೆದ ವೈದ್ಯರು

spot_img
- Advertisement -
- Advertisement -

ಹೈದರಾಬಾದ್: ತೀವ್ರ ಅಪೌಷ್ಟಿಕತೆಯ ಜೊತೆಗೆ ‘ರಾಪುಂಝೆಲ್ ಸಿಂಡ್ರೋಮ್’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಹುಡುಗಿಯ ಜೀವ ಉಳಿಸಿ ತೆಲಂಗಾಣದ ಉಸ್ಮಾನಿಯಾ ಜನರಲ್ ಆಸ್ಪತ್ರೆಯ ವೈದ್ಯರು  ಇತಿಹಾಸ ನಿರ್ಮಿಸಿದ್ದಾರೆ.

ಶಂಶಾಬಾದ್‌ನ ಹುಡುಗಿ ಕಳೆದ 5 ತಿಂಗಳಿನಿಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಳು.  ಇತ್ತೀಚೆಗೆ ಹೊಟ್ಟೆ ನೋವು ಹಾಗೂ ವಾಂತಿ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಳು. ಪರೀಕ್ಷಿಸಿದಾಗ ಆಕೆಯ ಹೊಟ್ಟೆಯಲ್ಲಿ ಕೂದಲು ಇರೋದು ಗೊತ್ತಾಗಿದೆ. ಬಳಿಕ ಆಸ್ಪತ್ರೆಯ ಅಧೀಕ್ಷಕ ಡಾ.ನಾಗೇಂದರ್ ಬಿ. ಅವರನ್ನೊಳಗೊಂಡ ವೈದ್ಯರ ತಂಡವು 150 ಸೆಂ.ಮೀ ಉದ್ದವಿದ್ದ ಸುಮಾರು 2 ಕೆಜಿ ಕೂದಲನ್ನು ಹೊಟ್ಟೆಯಿಂದ ಹೊರ ತೆಗೆದಿದ್ದಾರೆ.

ವಿಶ್ವದಲ್ಲಿ ಮೊದಲ ಬಾರಿ ರೋಗಿಯ ಹೊಟ್ಟೆ ಹಾಗೂ ಸಣ್ಣ ಕರುಳಿನಿಂದ ಇಷ್ಟೊಂದು ಉದ್ದದ ಕೂದಲನ್ನು ಹೊರ ತೆಗೆಯಲಾಗಿದೆ. ಇಲ್ಲಿಯವರೆಗೆ, ವಿಶ್ವಾದ್ಯಂತ ಇಂತಹ 68 ಪ್ರಕರಣಗಳು ಮಾತ್ರ ವರದಿಯಾಗಿವೆ.150 ಸೆಂ.ಮೀ ಕೂದಲಿನ ಪೈಕಿ 30 ಸೆಂ.ಮೀ ಹೊಟ್ಟೆಯಲ್ಲಿ ಹಾಗೂ ಸಣ್ಣ ಕರುಳಿನಲ್ಲಿ120 ಸೆಂ.ಮೀ.ಪತ್ತೆಯಾಗಿದೆ.

“ಜೂನ್ 2 ರಂದು ರೋಗಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ರೋಗಿಗೆ ಸ್ವಂತ ಕೂದಲನ್ನು ತಿನ್ನುವ ಚಾಳಿ ಇದೆ ಎಂದು ಸಹೋದರಿ ನಮಗೆ ಮಾಹಿತಿ ನೀಡಿದ್ದರು. ಹುಡುಗಿಗೆ ಕೊರೋನ ಪಾಸಿಟಿವ್ ಇದ್ದ ಕಾರಣ ಆ ಸಮಯದಲ್ಲಿ ಆಕೆಗೆ ಚಿಕಿತ್ಸೆಯನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಹುಡುಗಿ ಗಾಂಧಿ ಆಸ್ಪತ್ರೆಯಲ್ಲಿ ಕೊರೋನದಿಂದ ಯಶಸ್ವಿಯಾಗಿ ಚೇತರಿಸಿಕೊಂಡ ಬಳಿಕ ಶಸ್ತ್ರಚಿಕಿತ್ಸೆ  ನಡೆಸಲಾಯಿತು ಎಂದು ಅರಿವಳಿಕೆ ವಿಭಾಗದ ಡಾ. ಪಾಂಡು ನಾಯಕ್ ಹೇಳಿದ್ದಾರೆ.

- Advertisement -
spot_img

Latest News

error: Content is protected !!