Saturday, May 25, 2024
Homeತಾಜಾ ಸುದ್ದಿಕೆಪಿಟಿಸಿಎಲ್ ನಿಂದ ಜುಲೈ ನಲ್ಲಿ 1550 ನೇಮಕ ಪ್ರಕ್ರಿಯೆ: ಇಂಧನ ಸಚಿವ ಸುನೀಲ್ ಕುಮಾರ್ ಘೋಷಣೆ

ಕೆಪಿಟಿಸಿಎಲ್ ನಿಂದ ಜುಲೈ ನಲ್ಲಿ 1550 ನೇಮಕ ಪ್ರಕ್ರಿಯೆ: ಇಂಧನ ಸಚಿವ ಸುನೀಲ್ ಕುಮಾರ್ ಘೋಷಣೆ

spot_img
- Advertisement -
- Advertisement -

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ಮುಂದಿನ‌ ತಿಂಗಳು 1550 ಹೊಸ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಕೆಪಿಟಿಸಿಎಲ್ ಹಾಗೂ ವಿವಿಧ ಎಸ್ಕಾಂ ವ್ಯಾಪ್ತಿಯಲ್ಲಿ ಕಿರಿಯ ಪವರ್ ಮ್ಯಾನ್ ಹಾಗೂ ೧೩೭೫ ಜನರಿಗೆ ನೇಮಕ ಆದೇಶ ನೀಡಿ ಮಾತನಾಡಿದ ಅವರು, ಇಂಧನ‌ ಇಲಾಖೆಯಲ್ಲಿ ನಡೆಯುವ ಯಾವುದೇ ನೇಮಕಗಳು ಪ್ರಭಾವ, ಒತ್ತಡಕ್ಕೆ ಮಣಿಯದೇ ಪಾರದರ್ಶಕವಾಗಿ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ‌ ಮಾತಿಗೆ ಕಿವಿಕೊಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಕೆಪಿಟಿಸಿಎಲ್ ವತಿಯಿಂದ ಸಿಬ್ಬಂದಿ ನೇಮಕಕ್ಕೆ ಪ್ರಕ್ರಿಯೆ ಆರಂಭವಾಗಿದೆ. ಸುಮಾರು 3.5 ಲಕ್ಷ ಜನರು ಅರ್ಜಿ ಸಲ್ಲಿಸಿದ್ದು, ಜುಲೈ 23 ಮತ್ತು 24 ರಿಂದ ಪ್ರಕ್ರಿಯೆ ಆರಂಭವಾಗುತ್ತದೆ. ಆದಷ್ಟು ಬೇಗ ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.

ನಾನು ಇಂಧನ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಹಲವಾರು ಬದಲಾವಣೆ ತರುವ ಪ್ರಯತ್ನ ನಡೆಸಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೇವೆ. ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸಮಸ್ಯೆ ಬಗೆಹರಿಸುವುದಕ್ಕೂ ಇಲಾಖೆ ಬದ್ಧವಾಗಿದ್ದು,ಇನ್ನೆರಡು ದಿನಗಳಲ್ಲಿ ಬೆಸ್ಕಾಂ ಎಂಡಿ ನೇತೃತ್ವದ ಸಮಿತಿ ವರದಿ ನೀಡುತ್ತದೆ. ಅದನ್ನು ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಕೆಪಿಟಿಸಿಎಲ್ ಎಂಡಿ ಡಾ.ಎನ್. ಮಂಜುಳಾ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!