Friday, July 12, 2024
Homeಕರಾವಳಿಮಂಗಳೂರುಮಂಗಳೂರು: ರಾಜಕಾಲುವೆಗೆ ಆಟೋ ರಿಕ್ಷಾ ಉರುಳಿ ಚಾಲಕ ಸಾವು

ಮಂಗಳೂರು: ರಾಜಕಾಲುವೆಗೆ ಆಟೋ ರಿಕ್ಷಾ ಉರುಳಿ ಚಾಲಕ ಸಾವು

spot_img
- Advertisement -
- Advertisement -

ಮಂಗಳೂರು: ರಾಜಕಾಲುವೆಗೆ ಆಟೋ ರಿಕ್ಷಾ ಉರುಳಿ ಚಾಲಕ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಕೊಟ್ಟಾರದ ಅಬ್ಬಕ್ಕ ನಗರದಲ್ಲಿ ನಡೆದಿದೆ. ದೀಪಕ್ ಮೃತ ಅಟೋ ಚಾಲಕ.

ಮಂಗಳೂರಿನಲ್ಲಿ ಶುಕ್ರವಾರ ರಾತ್ರಿ ಭಾರೀ ಮಳೆ ಸುರಿಯುತ್ತಿತ್ತು. ಪರಿಣಾಮ ಕೊಟ್ಟಾರದಲ್ಲಿದ್ದ ರಾಜಕಾಲುವೆ ತುಂಬಿ ಹರಿಯುತ್ತಿತ್ತು. ಈ ರಾಜಕಾಲುವೆಗೆ ಯಾವುದೇ ತಡೆಗೋಡೆ ಇಲ್ಲದ ಕಾರಣ ನೀರು ರಸ್ತೆಗೂ ಬಂದಿತ್ತು. ರಾಜಕಾಲುವೆಯು ಉಕ್ಕಿದ ಪರಿಣಾಮ ರಸ್ತೆಗೆ ಸಮಾನವಾಗಿ ನೀರು ಹರಿಯುತ್ತಿತ್ತು.ಈ ವೇಳೆ ರಾಜಕಾಲುವೆ ಅಂತಾ ಗೊತ್ತಾಗದೇ ಹರಿಯುತ್ತಿರುವ ನೀರಿನಲ್ಲಿ ದೀಪಕ್ ಆಟೋ ಚಲಾಯಿಸಿದ್ದಾರೆ. ಪರಿಣಾಮ ಆಟೋ ರಾಜಕಾಲುವೆಗೆ ಉರುಳಿದ್ದು, ನೀರಿನಲ್ಲಿ ಮುಳುಗಿ ಚಾಲಕ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳೀಯರು ಹಾಗೂ ದಾರಿಹೋಕರು ಮೃತದೇಹ ಮೇಲೆತ್ತಿದ್ದಾರೆ.

ಕಾಲುವೆಗೆ ತಡೆಗೋಡೆ ನಿರ್ಮಿಸದೇ ಇರುವುದು ಭಾರೀ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಮಂಗಳೂರು ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

- Advertisement -
spot_img

Latest News

error: Content is protected !!