- Advertisement -
- Advertisement -
ಮಂಗಳೂರು; ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಎರಜು ಪ್ರಕರಣ ದಾಖಲಾಗಿರುವ ಬಗ್ಗೆ ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಈ ಪ್ರಕರಣದಲ್ಲಿ ಕಾಂಗ್ರೆಸ್ ನ ಒತ್ತಡ ಅಂದರೆ ಏನು? ಕಾನೂನು ಎಲ್ಲರಿಗೂ ಒಂದೇ ಅಲ್ವೇನ್ರೀ. ಎಂದಿದ್ದಾರೆ.
ಐಪಿಸಿ ಸೆಕ್ಷನ್ 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಇದು ಬೇಲೇಬಲ್ ಅಫೆನ್ಸಾ ನಾನ್ ಬೇಲೆಬಲ್ ಅಪೆನ್ಸಾ?ಇದು ನಾನ್ ಬೇಲೆಬಲ್ ಅಫೆನ್ಸ್ .ಈ ಪ್ರಕರಣ ಬೇಲೇಬಲ್ ಅಫೆನ್ಸ್ ಅಲ್ಲ.ಈ ಪ್ರಕರಣದಲ್ಲಿ ಏಳು ವರ್ಷ ಜೈಲುವಾಸ ಇದೆ.ಎಂಎಲ್ ಎ ಅಂತಾ ಬಿಟ್ಟು ಬಿಡೋಕೆ ಆಗುತ್ತಾ?.ಎಂಎಲ್ ಎ ಆದ್ರೆ ಪೊಲೀಸ್ ಮೇಲೆ ಗಲಾಟೆ ಮಾಡಬಹುದಾ ಎಂದು ಪ್ರಶ್ನಿಸಿದ್ದಾರೆ.
ಶಾಸಕ ಪೂಜಾ ಮೇಲೆ ಎರಡು ಎಫ್ ಐ ಆರ್ ಇದೆ.ಶಾಸಕ ಪೂಂಜಾ ಯಾರ ಪರವಾಗಿ ಗಲಾಟೆ ಮಾಡಿದ್ದಾರೆ ಗೊತ್ತಾ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.
- Advertisement -