Friday, July 12, 2024
Homeಅಪರಾಧಉದ್ಯೋಗಿಯಿಂದ ಕಂಪೆನಿಗೆ 25 ಲಕ್ಷ ರೂ. ವಂಚನೆ; ದೂರು ದಾಖಲು

ಉದ್ಯೋಗಿಯಿಂದ ಕಂಪೆನಿಗೆ 25 ಲಕ್ಷ ರೂ. ವಂಚನೆ; ದೂರು ದಾಖಲು

spot_img
- Advertisement -
- Advertisement -

ಮೈಸೂರಿನಲ್ಲಿ ಶಾಖಾ ಕಚೇರಿ ಹೊಂದಿರುವ ಮಂಗಳೂರಿನ ಸಂಸ್ಥೆಯೊಂದಕ್ಕೆ ಅದರ ಉದ್ಯೋಗಿ 25 ಲಕ್ಷ ರೂ. ವಂಚನೆ ಮಾಡಿದ್ದು, ಈ ಕುರಿತು ನಗರದ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ: ಸೇಲ್ಸ್‌ ಕಾರ್ಪೋರೇಷನ್‌ ಸಂಸ್ಥೆಯ ಮೈಸೂರಿನ ಕಚೇರಿಯಲ್ಲಿ ಸೋಮೇಶ್ವರ ನಿವಾಸಿ ಹರ್ಷಿತ್‌ (28) ಎಂಬಾತನನ್ನು ಮ್ಯಾನೇಜರ್‌ ಆಗಿ ನೇಮಕ ಮಾಡಲಾಗಿತ್ತು. ಅಲ್ಲಿನ ಎಲ್ಲ ವ್ಯವಹಾರಗಳನ್ನು ಆತನೇ ನೋಡಿಕೊಳ್ಳುತ್ತಿದ್ದ. ಆದರೆ ಇತ್ತೀಚೆಗೆ ಆತ ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿದ್ದು, ಕಂಪೆನಿಯ ಮಾಲಕರು ಕಚೇರಿಗೆ ಹೋಗಿ ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಏರುಪೇರಾಗಿತ್ತು. ಆತ ಕಂಪೆನಿಯಿಂದ ಖರೀದಿ ಮಾಡಲಾದ ವಸ್ತುಗಳಿಗೆ ತನ್ನ ಬ್ಯಾಂಕ್‌ ಖಾತೆಯನ್ನು ಲಿಂಕ್‌ ಮಾಡಿರುವುದು ಕಂಡು ಬಂದಿದೆ. ಸುಮಾರು 25 ಲಕ್ಷ ರೂ. ವಂಚನೆ ಮಾಡಿರುವುದು ತಿಳಿದು ಬಂದಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!