Thursday, June 4, 2026
Homeಕರಾವಳಿಮಂಗಳೂರು: ಮದರಸ ಬಿಟ್ಟು ಬರುತ್ತಿದ್ದ ವಿದ್ಯಾರ್ಥಿ‌ ಮೇಲೆ ಹಲ್ಲೆ ಪ್ರಕರಣ : ತಾನೇ ಬಟ್ಟೆ ಹರಿದುಕೊಂಡಿದ್ದ...

ಮಂಗಳೂರು: ಮದರಸ ಬಿಟ್ಟು ಬರುತ್ತಿದ್ದ ವಿದ್ಯಾರ್ಥಿ‌ ಮೇಲೆ ಹಲ್ಲೆ ಪ್ರಕರಣ : ತಾನೇ ಬಟ್ಟೆ ಹರಿದುಕೊಂಡಿದ್ದ ಬಾಲಕ

- Advertisement -
- Advertisement -

ಮಂಗಳೂರು: ಇಲ್ಲಿನ ಕೃಷ್ಣಾಪುರದಲ್ಲಿ ಮದರಸ ಬಿಟ್ಟು ಬರುತ್ತಿದ್ದ ವಿದ್ಯಾರ್ಥಿ‌ ಮೇಲೆ ಹಲ್ಲೆ ನಡೆದಿದೆ‌ ಎನ್ನಲಾದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಈ‌ ಬಗ್ಗೆ ಮಂಗಳೂರು ‌ಕಮಿಷನರ್ ಸ್ಪೋಟಕ ‌ಮಾಹಿತಿ ಬಿಚ್ಚಿ ಟ್ಟಿದ್ದಾರೆ.

ಈ ಬಗ್ಗೆ ಮಾದ್ಯಮದ ಜೊತೆ‌ ಮಾತನಾಡಿದ‌ ಕಮಿಷನರ್ ಎನ್.‌ಶಶಿಕುಮಾರ್, ಮದ್ರಾಸ ವಿದ್ಯಾರ್ಥಿಯೇ ವೈಯಕ್ತಿಕ ಕಾರಣದಿಂದ ತಾನೇ ಬಟ್ಟೆಯನ್ನು‌ ಹರಿದುಕೊಂಡಿದ್ದಾನೆ. ಆತ ವಿಚಾರಣೆ ವೇಳೆ ಒಂದಷ್ಟು ವಿಚಾರಗಳು ಬಾಯ್ಬಿಟ್ಟಿದ್ದಾನೆ. ಓದುವುದರಲ್ಲಿ ಹಿಂದೆ ಬಿದ್ದಿದ್ದೆ, ಓದಿದರೂ ಅರ್ಥ ಆಗುವುದಿಲ್ಲ, ಶಾಲೆಯಲ್ಲಿ ಒಳ್ಳೆಯ ಸ್ನೇಹಿತರಿಲ್ಲ, ಕಪ್ಪಾಗಿದ್ದಾನೆ ಎಂದು ಸ್ನೇಹಿತರು ದೂರುತ್ತಿದ್ದರು. ಮನೆಯಲ್ಲೂ ಬಡತನವಿದೆ. ತಂದೆ ತಾಯಿ ಹಣ ಖರ್ಚು ಮಾಡಿ ಶಾಲೆಗೆ ಕಳುಹಿಸಿದರೂ  ನನಗೆ ಸರಿಯಾಗಿ ಓದಲು ಆಗುತ್ತಿಲ್ಲ. ಸ್ನೇಹಿತರು ಕೂಡ ನನ್ನಲ್ಲಿ ಹಣ ಮತ್ತು ಸೈಕಲ್ ಇದ್ದಾಗ ಮಾತ್ರ ಹತ್ತಿರ ಬರುತ್ತಾರೆ. ಇದರಿಂದ ನಾನು ಬೇಸರಗೊಂಡು ಬ್ಯಾಗ್ ನಲ್ಲಿದ್ದ ಪೆನ್ ನಿಂದ ಬಟ್ಟೆ ಹರಿದುಕೊಂಡಿರುವ ಬಗ್ಗೆ ಹೇಳಿದ್ದಾನೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.

ಘಟನೆ‌ ನಡೆದಾಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಸಿಟಿವಿ ದೃಶ್ಯಾವಳಿ, ವಿದ್ಯಾರ್ಥಿಯ ಹೇಳಿಕೆ, ಪೋಷಕರ ಹೇಳಿಕೆಯನ್ನು ತೆಗೆದುಕೊಂಡಿದ್ದೇವೆ.‌ಇದೀಗ ಸತ್ಯಾಂಶತೆ ಬಯಲಾಗಿದೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!