Friday, June 5, 2026
Homeಉದ್ಯಮರಾಜ್ಯದ ರೈತರಿಗೆ ಬಂಪರ್ ಸುದ್ದಿ‌ - ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ಲಭ್ಯ

ರಾಜ್ಯದ ರೈತರಿಗೆ ಬಂಪರ್ ಸುದ್ದಿ‌ – ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ಲಭ್ಯ

- Advertisement -
- Advertisement -

ದೇಶವು ಪ್ರಸ್ತುತ ಕೊರೊನಾವೈರಸ್ ಸಾಂಕ್ರಾಮಿಕ ಕೋವಿಡ್ 19 ಜೊತೆಗೆ ಹೋರಾಡುತ್ತಿದೆ. ಕರೋನಾ ಮಹಾಮಾರಿಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಸರ್ಕಾರವು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದೆ. ಕೊರೊನಾ ಲಾಕ್‌ ಡೌನ್‌ ಸಂಕಷ್ಟದಿಂದ ಬೆಳೆದ ಬೆಳೆ ಮಾರಾಟ ಮಾಡಲಾಗದೆ ಕಂಗೆಟ್ಟಿದ್ದ ರೈತರಿಗೆ ರಾಜ್ಯ ಸರ್ಕಾರ ಬಂಪರ್‌ ಸುದ್ದಿ ನೀಡಿದೆ.

ಪ್ರಸಕ್ತ ಸಾಲಿನಲ್ಲಿ ಮೂರು ಲಕ್ಷ ರೂ. ಗಳವರೆಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡಲು ಆದೇಶ ಹೊರಡಿಸಲಾಗಿದ್ದು, ಅದಕ್ಕೂ ಮೇಲ್ಪಟ್ಟ ಸಾಲ ಪಡೆದುಕೊಂಡರೆ ಸಾಮಾನ್ಯ ಬಡ್ಡಿ ದರ ವಿಧಿಸಲಾಗುತ್ತದೆ.

ಸಹಕಾರಿ ಸಂಸ್ಥೆಗಳಿಂದ ರೈತರು ಈ ಸಾಲ ಪಡೆದುಕೊಳ್ಳಬಹುದಾಗಿದ್ದು, ಸರ್ಕಾರದ ಈ ತೀರ್ಮಾನದಿಂದಾಗಿ ರೈತ ಸಮುದಾಯ ಸಂತಸಗೊಂಡಿದೆ.

- Advertisement -

Latest News

error: Content is protected !!