Thursday, June 4, 2026
Homeಕರಾವಳಿನೇತ್ರಾವತಿ ನದಿಗೆ ಹಾರಿದ ಯುವಕನನ್ನು ಸ್ಥಳೀಯ ಈಜುಗಾರರಿಂದ ರಕ್ಷಣೆ

ನೇತ್ರಾವತಿ ನದಿಗೆ ಹಾರಿದ ಯುವಕನನ್ನು ಸ್ಥಳೀಯ ಈಜುಗಾರರಿಂದ ರಕ್ಷಣೆ

- Advertisement -
- Advertisement -

ಪಾಣೆಮಂಗಳೂರು: ಇಲ್ಲಿಯ ಹಳೆ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಪರಿಸರದ ಯುವಕರ ತಂಡ ರಕ್ಷಿಸಿದೆ.

ಹಾಸನ ಜಿಲ್ಲೆಯ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಈತ ಮಂಗಳೂರು- ಬೆಂಗಳೂರು ಸಂಚರಿಸುವ ಖಾಸಗಿ ಬಸ್ಸಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. .

ಇಂದು ಬೆಳಿಗ್ಗೆ 8.15 ರ ಸುಮಾರಿಗೆ ತನ್ನ ಖಾಕಿ ಸಮವಸ್ತ್ರ ಧರಿಸಿಕೊಂಡೇ ಯುವಕ ಸೇತುವೆಯ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಇದನ್ನು ಕಂಡ ಸ್ಥಳೀಯ ಈಜುಗಾರರಾದ ಮಹಮ್ಮದ್, ಶಿಹಾಬ್ ಮತ್ತು ಸ್ವಾಲಿ ದೋಣಿಯ ಮೂಲಕ ತೆರಳಿ ಯುವಕನ್ನು ರಕ್ಷಿಸಿದ್ದಾರೆ. ಸದ್ಯ ಯುವಕನಿಗೆ ಬಂಟ್ವಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

Latest News

error: Content is protected !!